..
ಮೂರ್ಜಗದೊಡೆಯ ವಿರಾಜಿಸಿ ಕುಳಿತಿಹನು
ರಾಜ ರಾಜರ ಗಂಡ ರಾಜಗೋಪಾಲ ಪ.
ಚಿತ್ತಜನೈಯನು ಮುತ್ತಿನ ಗದ್ದುಗೆ ಮೇಲೆ
ಅರ್ಥಿಲೆ ಏರಿ ಕುಳಿತ ಮತ್ತೆ ಗೋಪಾಲ 1
ಇಂದಿರೇಶನು ಬಹು ಚಂದಾಗಿ ಕುಳಿತಿಹನು
ಬಂದ ಜನರ ಸಹಿತ ತಂದೆ ಗೋಪಾಲ 2
ಸರ್ಪಶಯನನ ಬದಿಯಲೊಪ್ಪುವ ಬಲರಾಮ
ವಿಪ್ರರಿಂದಲೆ ಕುಳಿತ ಅಪ್ಪ ಗೋಪಾಲ3
ಥಳ ಥಳ ಹೊಳೆಯುತ ಅಳಕಿಸಿ ಸೂರ್ಯನ
ಬೆಳಕು ತುಂಬಿಸಿ ತಾನು ಕುಳಿತ ಗೋಪಾಲ 4
ಮುತ್ತು ಮಾಣಿಕ ನವರತ್ನ ಸಿಂಹಾಸನ
ಅರ್ಥಿಲೆ ಏರಿ ಕುಳಿತ ಮತ್ತೆ ಗೋಪಾಲ5
ನೃತ್ಯ ವಾದ್ಯಗಳಿಂದ ನರ್ತನ ಮಾಡಿಸಿ ಕುಳಿತ
ಕೀರ್ತಿವಂತನು ದಿವ್ಯ ಮೂರ್ತಿ ಗೋಪಾಲ 6
ಬಂದ ಜನಕೆ ಆನಂದವ ಪಡಿಸುತ
ಚಂದ್ರನಂತಲೆ ಕುಳಿತ ಬಂದು ರಾಮೇಶ 7
****