Showing posts with label ಅವ ಸಂತನಲ್ಲಾ ಸಂತರ ವೇಷದಿ ತಿರುಗಲೇನು gurumahipati. Show all posts
Showing posts with label ಅವ ಸಂತನಲ್ಲಾ ಸಂತರ ವೇಷದಿ ತಿರುಗಲೇನು gurumahipati. Show all posts

Wednesday, 1 September 2021

ಅವ ಸಂತನಲ್ಲಾ ಸಂತರ ವೇಷದಿ ತಿರುಗಲೇನು ankita gurumahipati

ಅವ ಸಂತನಲ್ಲಾ ಸಂತರ ವೇಷದಿ ತಿರುಗಲೇನು ಪ 

ಸಂತರಲ್ಲಿ ಹೋಗು | ಅಂತರ ಸುಖವರಿಲಿಲ್ಲಾ | ತಂತುವಿಡಿಯದೇ ಸ್ಥಿತಿ | ಭ್ರಾಂತತನಲ್ಯಾಡುವವ 1

 ಮಂಜುಜ್ಞಾನದಿಂದ ಬಹು | ರಂಜನೆಯಾ ಮಾಡಿ | ಬಂಜೆ ಹೂವಿನಂತೆ ಒಣ | ಭಂಜನೆಯಾ ದೋರುವವ 2 

ನಿಷ್ಠೆಯಿಂದ ಪರವಸ್ತು | ಮುಟ್ಟಿಗಾಣಲಿಲ್ಲಾ | ಭ್ರಷ್ಟ ಬೂಟಿಕೆಯ ಮಾಡಿ | ಹೊಟ್ಟೆಯನೇ ಹೊರೆವನವ 3 

ಮ್ಯಾಲ ಸಾಧುವೇಷ | ಒಳಗೆ ಖಳದೋಷ | ಕುಂದ ನೀಡುವವ 4 

ಗುರು ಮಹಿಪತಿಸುತ | ಸಾರಿದ ನೋಡಾ | ಶರಣರಿಗೇ ಬಾಗಿ ಅವರ ಚರಿತೆಯ ಕೊಂಡಾಡದವ 5

***