Showing posts with label ನೆಚ್ಚಬೇಡಿ ಪತಿತನಾರಿಯ ಕಚ್ಚುವ ಹಾವಿನ ಸಂಗವೆನ್ನಿ vijaya vittala. Show all posts
Showing posts with label ನೆಚ್ಚಬೇಡಿ ಪತಿತನಾರಿಯ ಕಚ್ಚುವ ಹಾವಿನ ಸಂಗವೆನ್ನಿ vijaya vittala. Show all posts

Wednesday, 16 October 2019

ನೆಚ್ಚಬೇಡಿ ಪತಿತನಾರಿಯ ಕಚ್ಚುವ ಹಾವಿನ ಸಂಗವೆನ್ನಿ ankita vijaya vittala

ವಿಜಯದಾಸ
ನೆಚ್ಚಬೇಡಿ ಪತಿತನಾರಿಯ |
ಕಚ್ಚುವ ಹಾವಿನ ಸಂಗವೆನ್ನಿ || ಪ

ಮೆಚ್ಚುಗೊಳಿಪಳು ಗುಣಿಸಿ ನೋಡಿ
ನಿಚ್ಚದಲಿ ಚಿತ್ತ ಚಂಚಲಳಾಗಿ ಅ.ಪ
ಪರಿಯಂತ |
ಯಾವದನಿತು ಮೊಗವನೆತ್ತದಲೆ ||
ಎವೆ ತೆಗೆದು ದಿಕ್ಕುಗಳು ನೋಡದೆ |
ಅವನಿಗೆ ಬಾಗಿ ನಡೆಯುತ ||
ತವರು ಮನೆಯವರನು ಹಳಿದು |
ನವÀನವ ಪ್ರಾವರ್ತನವನು ತೋರುತ ||
ಅವಗುಣಂಗಳಿಲ್ಲ ದೋಷಾದಲಿ |
ಲವಕಾಲವನು ಕಳೆವ ನಾರಿಯ 1

ಪ್ರಾಯಾವಸ್ಥೆ ಬಂದು ಪ್ರಾಪ್ತವಾಗಲು |
ಆಯುತಾಕ್ಷಿಗಳ ತಿರುಹಿ ಮೆಲ್ಲನೆ ||
ಬಾಯಲ್ಲಿ ಒಂದೊಂದು ಕ್ರಮಾಸಾರದಿ |
ನೋಯ ನೋಯದಂತೆ ವಚನವ ||
ದಾಯಿಗಳಂತೆ ಮತ್ಸರಿಸಿ ಬಯ್ಯದೆ |
ಮಾಯಾವಿ ಕಲ್ಪಿಸಿ ಮುಸಿಮುಸಿ ನಗೆ ||
ಆಯಕೆ ತಗಲಿ ಕಂಡ ಜನರಿಗೆ |
ಘಾಯ ಕಾಣಿಸದಂತೆ ಮಾಳ್ಪಳ 2

ಅತ್ತೆ ಮಾವಗೆ ಅತ್ಯಂತವಾಗಿ ತಾನು |
ಪ್ರತಿ ಉತ್ತರ ಪೇಳಲು ಅಂಜಿ ಅಂಜಿದಂತೆ ||
ಉತ್ತಮರ ಮನೋರಥವ ಕೆಡಿಸಿ |
ಅತ್ತಿಗಿ ನಾದುನಿ ಮಿಗಿಲಾದವರೆಲ್ಲ ||
ಕತ್ತೆ ನಾಯಿ ನರಿಯೆಂಬೊ ಸೊಲ್ಲಲ್ಲಾದೆ |
ಎತ್ತಲಾದರು ವಂಚಿಸಿ ಗಂಡನ್ನ ||
ತನ್ನಂತೆ ಮಾಡಿಕೊಂಡು ಹಗಲಿರುಳು ಥೈ- |
ತಥ್ಥಾ ಎಂದಾಡಿಸಿ ಕುಣಿಸುವ ಸತಿಯಳ 3

ಕೊಂಡ ತೆರದಿ |
ಪತಿಯ ಸಮಯ ನೋಡದೆ ತಾನು ||
ಸಥೆಯಿಂದಲಿ ಸಂಸಾರದೊಳಗಿದ್ದು |
ಸುತರ ಪಡೆದು ಹಮ್ಮಿಲಿ ||
ಕಥನವೆಬ್ಬಿಸಿ ಗಂಡನ್ನ ಅಡವಿ |
ಪಥವ ಹಿಡಿಸಿ ಹಣದಗೋಸುಗ ||
ಸತತ ಮನೆಯೊಳಗಿದ್ದ ಬದುಕು |
ಮಿತಿಯಿಲ್ಲದೆ ಭಕ್ಷಿಸುವ ನಾರಿಯ 4

ಒಲಿಪಗೆ ನೀವು ಮೋಸಗೊಂಡು |
ಒಲಿಯದಿರಿ ಸ್ತ್ರೀಯರಿಗೆ ಸೋತು ||
ಕಲಿಗೆ ಪ್ರಥಮ ಪಟ್ಟದ ಗದ್ದಿಗೆ |
ಸುಲಭವಲ್ಲವೋ ಸುಖವಿಲ್ಲಾ ||
ಕೆಲಕಾಲ ಮಹಾ ಕಾತರದಿಂದಲಿ |
ವಳಗಾಗದಿರು ಒಳಿತು ಪೇಳುವೆ ||
ಜಲಜಾಕ್ಷ ವಿಜಯವಿಠ್ಠಲನ್ನ ನಂಬಿರೋ |
ನಂಬಿರೋ ನಂಬಿರೋ ಚತುರರು 5
**

pallavi

neccabEDi patita nAriya kaccuva hAvina sangavenni

anupallavi

meccugoLipaLu guNasi nODi niccadali cittadali cancalaLAgi

caraNam 1

yuvatanage baruva pariyenta yAdanitu mogavanettadale
eve tegedu dikkugaLa nODade avanige bAgi naDeyuta
tavaru maneyavaranu haLidu nava nava prAvartanavanu tOruta
avaguNangaLilladO pAdili lavakAlavanu kaLava nAriya

caraNam 2

prAyAvastu bandu prAptavAgalu AyatAkSigaLa tiruhi mellane
bAyalli ondondu kramAsAradi nOya nOyadante vacanava
dAyidigaLante matsarisi bayyade mAyAvikalpisi musi musi nage
Ayake tagali kaNDa janarige ghAya klANisadante mALpaLa

caraNam 3

atte mAvage atyantavAgi tAnu prati uttara pELalu anji anjadante
uttamara manOrathava keDisi attigi nAdini migilAdavarella
kattenAyi nariyembO sollallAde yettalAdaru vancisi gaNDanna
tannante mADikoNDu hagaliruLu thai tattA endANisi kuNisuva satiyeLa

caraNam 4

mithuna bhAvake koNDa teradi patiya samaya nODade tAnu
santhayindali samsAradoLagiddu sutara paDedu hammili
kathavebbisi gaNDanna aDavi pathava hiDisi haNadagOsuga
satata maneyoLagidda baduku mitiyillade bhakSisuva nAriya

caraNam 5

olipage nIvu mOsagoNDu oliyadiri striyarige sOtu
kalige prathama paTTada gaddige sulabhavallavO sukhavillA
kelakAla mahA kAturadindali vaLagAgadiru oLitu pELuve
jalajAkSa vijayaviThalanna nambirO nambirO nambirO caturaru
***