Showing posts with label ಗುರುಮಧ್ವಮುನಿರನ್ನ ಮೂರುಪರಿಯದೋರಿದೆ mahipati. Show all posts
Showing posts with label ಗುರುಮಧ್ವಮುನಿರನ್ನ ಮೂರುಪರಿಯದೋರಿದೆ mahipati. Show all posts

Wednesday, 11 December 2019

ಗುರುಮಧ್ವಮುನಿರನ್ನ ಮೂರುಪರಿಯದೋರಿದೆ ankita mahipati

ಖಮಾಜರಾಗ ಆದಿತಾಳ

ಗುರು ಮಧ್ವಮುನಿರನ್ನ ಮೂರುಪರಿಯದೋರಿದೆ ನಿನ್ನ
ಹರಿಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ
ಸ್ಮರಣೆಯಲಿ ರಾಮನ ಪರಮಪಾಪನ್ನ ||೧||

ಅತಿಬಾಹು ಪರಾಕ್ರಮ ಕ್ಷಿತಿಯೊಳು ನಿನ್ನದೇ ನೇಮ
ಪ್ರಥಮಲ್ಯಾದೆ ಹನುಮ ದ್ವಿತೀಯಲ್ಯಾದೆ ಭೀಮ
ತೃತೀಯದಲಿ ಪೂರ್ಣಪ್ರಜ್ಞನೆನಿಸಿದೆ ನಿಸ್ಸೀಮ ||೨||

ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ
ಶ್ರೀಹರಿ ಸಾನ್ನಿಧ್ಯ ಪೂರ್ಣ ಇಹ ಸಕಲನಿಪುಣ
ಮಹಿಪತಿ ಮುಖ್ಯಪ್ರಾಣ ಸ್ವಹಿತಸಾಧನ ||೩||
********