Showing posts with label ಜಯ ಜಯ ಜಯ ಜಯ ಜಯ ರಾಘವೇಂದ್ರ narasimha. Show all posts
Showing posts with label ಜಯ ಜಯ ಜಯ ಜಯ ಜಯ ರಾಘವೇಂದ್ರ narasimha. Show all posts

Monday, 6 September 2021

ಜಯ ಜಯ ಜಯ ಜಯ ಜಯ ರಾಘವೇಂದ್ರ ankita narasimha

 ankita ನರಸಿಂಹ 

ರಾಗ: ನಾಟ  ತಾಳ: ಝಂಪೆ


ಜಯ ಜಯ ಜಯ ಜಯ


ಜಯ ರಾಘವೇಂದ್ರ ಸಜ್ಜನ ಪಯೋನಿಧಿ ಚಂದ್ರ

ಜಯ ಸುಗುಣಸಾಂದ್ರ ಜಯ ವಸುಧಾಮರೇಂದ್ರ ಅ.ಪ


ಪ್ರಥಮಾವತಾರದೊಳ್ ಪಿತನಿಗೋಸುಗಮಾಗಿ 

ರತಿ ಪತಿಯ ಪಿತನು ಸರ್ವತ್ರನಿಹನೆಂದು

ಪಂಥಗೈಯುತ ಉಕ್ಕು ಸ್ತಂಭದೊಳ್ ನರಹರಿಯ

ಅತ್ಯಂತ ರೌದ್ರಾವತಾರಗೈಸಿದನೆ 1

ಮರಳಿ ಕಲಿಯುಗದಿ ಹರಿದಾಸಕೂಟವ ರಚಿಸಿ

ಪರಮ ಮಧ್ವ ಮತಾಬ್ಧಿ ಮೀನನೆನಿಸಿ

ಸಿರಿಗೋಪಕೃಷ್ಣನ ಚರಣಗಳ ಭಜಿಸಿದ

ಪರಮ ಗುರುವರ್ಯ ಶ್ರೀಚಂದ್ರಿಕಾಚಾರ್ಯ 2

ತುಂಗಭದ್ರಾ ತೀರದೊಳು ನೆಲೆಸಿ ಲಕುಮಿ ನರ-

ಸಿಂಹನ ದಾಸಾಗ್ರಗಣ್ಯನೆನಿಸಿ ಉ-

ತ್ತುಂಗ ಮಹಿಮೆಗಳನ್ನು ಜಗಕೆತೋರ್ದ ಯತೀಂದ್ರ

ಅಂಗಲಾಚುವೆನಯ್ಯ ಪೊರೆ ರಾಘವೇಂದ್ರಾ 3

***