Showing posts with label ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ mahipati. Show all posts
Showing posts with label ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ mahipati. Show all posts

Thursday, 12 December 2019

ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ ankita mahipati

ಸಾರಂಗ್ (ಮಾಲಕಂಸ್ ) ರಾಗ ಝಂಪೆತಾಳ

ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ
ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ||ಪ||

ವಿಷಯಲಂಪಟಗೆ ಎಲ್ಲಿಹುದು ತಾ ವಿರಕ್ತಿಯು
ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು
ಮುಸುಕಿದ ಮಾಯದವಗೆ ಲ್ಲಿಹುದು ಮುಕ್ತಿಯು
ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು ||೧||

ಮರುಳಗುಂಟೆ ಅರಿವು ರಾಜಸನ್ಮಾನದ
ತರಳಗುಂಟೆ ಭಯವು ಘಟಸರ್ಪದ
ಎರಳೆಗುಂಟೆ ಖೂನ ಮೃಗಜಲವೆಂಬುವದ
ಸೋರೆಗುಂಟೆ ಮಾತು ಚಾತುರ್ಯದ ||೨||

ಕನಸು ಕಾಂಬುವಗೆ ಎಲ್ಲಿಹುದು ತಾನಿಹ ಸ್ಥಾನ
ಮನದಿಚ್ಛೆ ಇದ್ದವಗೆ ಎಲ್ಲಿಯ ಧ್ಯಾನ
ದೀನಮಹಿಪತಿಸ್ವಾಮಿ ಕಾಣದವಗೆಲ್ಲಿ ಘನ
ಅನುಭವಿಸಿಕೊಳದೆ ಜನ್ಮಕೆ ಬಂದಿದೇನ ||೩||
*********