RAO COLLECTIONS SONGS refer remember refresh render DEVARANAMA
ಸುಮ್ಮನೆ ಸುರಿವದೆ ಬ್ರಹ್ಮಾನಂದದ ಸುಖ ಒಮ್ಮನಾಗದೆ ಒಲಿಯದು ನಮ್ಮಯ್ಯನ ಕೃಪೆ ಪ
ಉನ್ಮನವಾಗದೆ ಸನ್ಮತದೋರದು ಚಿನ್ಮಯಾನಂದ ಮಹಿಮೆ ಕಣ್ದೆರೆಯದು 1
ಕಣ್ಣು ಕಂಡು ಕಾಣದೆ ಧನ್ಯವಾಗದು ಪ್ರಾಣ ಚೆನ್ನಾಗಿ ಮಾಡಿ ಸಾಧನ ಕಣ್ಣಾರೆ ಕಂಡು 2
ಲೇಸಾಗಿ ಭಾಸುತದೆ ಭಾಸ್ಕರಗುರು ಕೃಪೆ ದಾಸಮಹಿಪತಿ ಮನದೊಳು ವಾಸವಾಗಿದು 3
***