ಕಾಖಂಡಕಿ ಶ್ರೀ ಕೃಷ್ಣದಾಸರು
ಬರಿದೆ ದಣಿಯಬೇಡಿ | ಬಯಲ ಸಾಧನ ಕೂಡಿ | ನೆರೆ ಮಾಡಿ ಸಾಧು ಸಂತರಾ | ದಯವಂತರಾ ಪ
ಏನು ಓದಿದರೇನು | ಏನು ಕೇಳಿದರೇನು | ಜ್ಞಾನಿಗಳೊಡನಾಡದೇ | ಅನುಭವವಾಗುದೇ 1
ಬುಡದಲಿ ಫಲವಿದೆ | ತುದಿಮರನೇರುವರೇ | ಬಿಡು ಬಿಡು ನಾನಾ ಸಾಯಸಾ | ಭ್ರಾಂತಿ ವೇಷಾ 2
ಗುರು ಮಹಿಪತಿ ನುಡಿ | ಸಾರಿದ ನಂದ ನೋಡಿ | ಮರೆಯದೆ ಮಾಡಿ ಸಾಧನಾ | ಹರುಷ ನಿಧಾನಾ 3
***