Showing posts with label ಸಾಕು ಸಂಸಾರ ತೆರೆಯ ನೂಕಲಾರೆನು purandara vittala. Show all posts
Showing posts with label ಸಾಕು ಸಂಸಾರ ತೆರೆಯ ನೂಕಲಾರೆನು purandara vittala. Show all posts

Saturday, 7 December 2019

ಸಾಕು ಸಂಸಾರ ತೆರೆಯ ನೂಕಲಾರೆನು purandara vittala

ರಾಗ ಹಿಂದುಸ್ತಾನ್ ದೇಶಿ ರೂಪಕತಾಳ

ಸಾಕು ಸಂಸಾರ ತೆರೆಯ ನೂಕಲಾರೆನು
ಬೇಕು ನಿನ್ನ ಚರಣಕಮಲ ಬೇರನ್ಯತ್ರ ಗತಿಯ ಕಾಣೆ ||ಪ||

ಹುಟ್ಟಿದಂದಿನಿಂದ ಕಷ್ಟಪಟ್ಟು ಕಂಗೆಟ್ಟು ಮನದಿ
ಗುಟ್ಟು ಪೇಳ್ವೆನಯ್ಯ ಒಂದಿಷ್ಟು ಲಾಲಿಸೊ
ಕೊಟ್ಟ ಕಳತ ಕಣ್ಣ ನೆಲಕೆ ತಟ್ಟಿದಲ್ಲದೆ ಬಿಡದು ಮೊರೆ-
ಯಿಟ್ಟೆ ಕಾಯದಿರೆ ದೂರು ಮುಟ್ಟುವುದು ಶ್ರೀ ಲಕ್ಷ್ಮೀರಮಣ ||

ತಂದೆ ತಾಯಿ ಬಂಧು ಬಳಗವೆಂದು ಪಾಶಕ್ಕೆ ಸಿಲ್ಕಿ
ಒಂದು ದಿನದ ದಿನದ ಸುಖವನು ಬಂದು ಕಾಣೆನೊ
ಕಂದರ್ಪಜನಕ ನೀನು ಕರುಣವಿಟ್ಟು ಕಾಯದಿರೆ
ಕುಂದು ನಿಂದೆ ಬಂದರೆ ದೂರು, ತಂದು ಕೊಡುವರು ಲಕ್ಷ್ಮೀರಮಣ ||

ತುಂಡು ತುತ್ತು ಕೂಳಿಗಾಗಿ ಕಂಡವರ ಕಾಡಿ ಬೇಡಿ
ಹಿಂಡಿ ಹಿಪ್ಪೆ ಮಾಡಿ ಮನವ ಹೀನಗೊಳಿಸಿದೆ
ಉಂಡು ಬಾರದ ಊಟವನ್ನು ಕಾಣಬಾರದ ಕರ್ಮವನ್ನು
ಗುಂಡೆಗಾರರ ಕೇರಿಗೆ ಸಿಕ್ಕಿ ಚೆಂಡಿಗಿಂತ ಹಗುರವಾದೆ ||

ವಾಸಿಬಂಧನಾಗಿ ಎನ್ನ ಭಾಷೆಯನ್ನು ಜನರು ನೋಡಿ
ಆಶೆ ಮಾಡಿಕೊಂಡರೆ ನಿರಾಶೆಯಾಯಿತೊ
ಮೋಸದಿಂದ ಮಡುವ ಧುಮುಕಿ ಈಸಲಾರೆ ಮುಳುಗಿ ಮುಳುಗಿ
ಘಾಸಿಯಾಗುತೇನೆ ಕೇಳು ವಾಸುದೇವ ಸುಪ್ರಸನ್ನ ||

ಇಷ್ಟು ದಿನದಿ ಜನರ ಕೈಯ ನಿಷ್ಠುರಾದ ಮಾತ ಕೇಳಿ
ಕಷ್ಟಕಾಲ ಬಂತು ಘಳಿಗೆ ಕಳೆಯಲಾರೆನು
ಇಷ್ಟರ ಮೇಲಿನ್ನು ಮನಸು ಎರಕವಿಲ್ಲದೆ ಕೇಳು
ಇಷ್ಟ ನೀನಹುದು ಪುರಂದರವಿಟ್ಠಲ ನೀನಲ್ಲದಿಲ್ಲ ||
***

pallavi

sAku samsAra tereya nUkalArenu bhEku ninna caraNa kamala bEranyatra gatiya kANe

caraNam 1

huTTidandininda kaSTa paTTu kangeTTu manadi guTTu bELvenayya ondiSTu lAliso
koTTa kaLada kaNNa nelake taTTidallade biDadu moreyiTTe kAyadire dUru muTTuvudu shrI lakSmIramaNa

caraNam 2

tande tAyi bandhu baLagavendu pAshakke silki ondu dinada dinada sukhavanu bandu kANeno
kandarpa janaka nInu karuNaviTTu kAyadire kundu ninde bandare dUru tandu koDuvaru lakSmIramaNa

caraNam 3

tuNDu tuttu kULigAgi kaNdavara kADi bEDi hiNDi hippe mADi manava hInagoLiside
uNDu bArada Utavannu kaNDu bArada karmavannu guNDegArara kERige sikki ceNDiginta haguravAde

caraNam 4

vAsibandhanAgi enna bhASeyannu janaru nODi Ashe mADi koNdare nirAsheyAyito
mOsadinda maDuva dhumuki IsalAre muLugi muLugi gAsiyAgudEne kELu vAsudEva suprasanna

caraNam 5

iSTu dinadi janara kaiya niSThUrAda mAta kELi kaSTakAla bantu gaLige kaLeyalArenu
iSTara mElinnu manasu eragavillade kELu iSTu nInahudu purandara viTTala nInnadilla
***