ಗುರುರಾಯರ ನಂಬಿರೋ, ಮಾರುತಿಯೆಂಬ
ಗುರುರಾಯರ ನಂಬಿರೊ ||ಪ||
ಗುರುರಾಯರ ನಂಬಿ ಬಿಡದೆ ಯಾವಾಗಲು
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ||ಅ.ಪ||
ವನಧಿಯ ಮನೋವೇಗದಿ ,ಲಂಘಿಸಿ ಮಹೀ-
ತನುಜೆಯ ಶೋಕವ ತರಿದು
ವನವ ಬೇರೊಡನೆ ಕಿತ್ತಾಡಿ ಆರ್ಭಟಿಸಿದ
ದನುಜರ ಬಡಿದು ಲಂಕೆಯ ತನ್ನ ಸಖಗಿತ್ತ ||
ಕೌರವ ಬಕ ಹಿಡಿಂಬ, ಕೀಚಕರೆಂಬ
ದುರುಳ ಸಂತತಿ ನೆಗ್ಗೊತ್ತಿ
ಘೋರ ಪಾತಕಿ ದುಶ್ಯಾಸನನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ ||
ಜೀವೇಶರೊಂದೆಂಬ ದುರ್ವಾದಿಯ
ಭಾವಶಾಸ್ತ್ರವ ಮುರಿದು
ಕೋವಿದರಿಗೆ ಸದ್ಭಾಷ್ಯ ತೋರಿದ
ದೇವ ಪುರಂದರ ವಿಠಲ ಸೇವಕನಾದ ||
***
ರಾಗ: ಕಲ್ಯಾಣಿ. ಅಟತಾಳ (raga tala may differ in audio)
ಗುರುರಾಯರ ನಂಬಿರೊ| ಮಾರುತಿಯೆಂಬ
ಗುರುರಾಯರ ನಂಬಿರೊ
ಗುರುರಾಯರ ನಂಬಿ ಬಿಡದೆ ಯಾವಾಗಲು
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ||ಗುರು||
ಶರಧಿಯ ಮನೋವೇಗದಿ ಲಂಘಿಸಿ
ಮಹಿತನುಜೆ ಶೋಕವ ತರಿದು
ವನವ ಬೇರೊಡನೆ ಕಿತ್ತಾಡಿ ಆರ್ಭಟಿಸಿದ
ದನುಜರ ಬಡೆದು ಲಂಕೆಯ ತನ್ನ ಸಖಗಿತ್ತ ||ಗುರು||
ಜೀವೇಶರೊಂದೆಂಬ ದುರ್ವಾಧಿಯ
ಭಾವಶಾಸ್ತ್ರವ ಮುದದಿ ಮುರಿದು
ಕೋವಿದರಿಗೆ ಸದ್ಭಾಷ್ಯವ ತೋರಿದ
ದೇವ ಪುರಂದರ ವಿಠಲ ಸೇವಕರಾದ ||ಗುರು||
***
gururAyara naMbiro| mArutiyeMba
gururAyara naMbiro
gururAyara naMbi biDade yAvAgalu
duritava kaLedu sadgatiya paDevarella ||guru||
Saradhiya manOvEgadi laMGisi
mahitanuje SOkava taridu
vanava bEroDane kittADi ArBaTisida
danujara baDedu laMkeya tanna saKagitta ||guru||
jIvESaroMdeMba durvAdiya
BAvaSAstrava mudadi muridu
kOvidarige sadBAShyava tOrida
dEva puraMdara viThala sEvakarAda ||guru||
***
Gururayara nambiro, marutiyemba
Gururayara nambiro ||pa||
Gururayara nambi bidade yavagalu
Duritava kaledu sadgatiya padevarella ||a.pa||
Vanadhiya manovegadi ,langisi mahi-
Tanujeya sokava taridu
Vanava berodane kittadi arbatisida
Danujara badidu lankeya tanna sakagitta ||
Kaurava baka hidimba, kicakaremba
Durula santati neggotti
Gora pataki dusyasanana rakutava
Hiri mudadi muravairiya Bajisida ||
Jivesarondemba durvadiya
Bavasastrava muridu
Kovidarige sadbashya torida
Deva purandara vithala sevakanada ||***
pallavi
gururAyara nambirO mArutiyemba
anupallavi
gururAyara nambi biDade yAvAgalu duritava kaLedu sadgatiya paDevarella
caraNam 1
vanadiya manOvEgadi langhisi mahi tanujaya shOka tApava kaLedu
vanavu pErODana kittIDADi idirAda danujara sadedu lankeya tanna sakhagitta
caraNam 2
kaurava baka hiDimba kIcakaremba duruLa santatiyella neggotti
ghOra pAtaki dushyAsana rakutava hIri mudadi munivairiya bhajisida
caraNam 3
jIvEsharondemba durvAdiya kubhAva shAstragaLella taridOTIsi
kOvidarige sad bhASya sudeyanittu dEva purandara viTTala sEvakanAda
***
ಗುರುರಾಯರ ನಂಬಿರೊ| ಮಾರುತಿಯೆಂಬ
ಗುರುರಾಯರ ನಂಬಿರೊ
ಗುರುರಾಯರ ನಂಬಿ ಬಿಡದೆ ಯಾವಾಗಲು
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ||ಗುರು||
ಶರಧಿಯ ಮನೋವೇಗದಿ ಲಂಘಿಸಿ
ಮಹಿತನುಜೆ ಶೋಕವ ತರಿದು
ವನವ ಬೇರೊಡನೆ ಕಿತ್ತಾಡಿ ಆರ್ಭಟಿಸಿದ
ದನುಜರ ಬಡೆದು ಲಂಕೆಯ ತನ್ನ ಸಖಗಿತ್ತ ||ಗುರು||
ಜೀವೇಶರೊಂದೆಂಬ ದುರ್ವಾಧಿಯ
ಭಾವಶಾಸ್ತ್ರವ ಮುದದಿ ಮುರಿದು
ಕೋವಿದರಿಗೆ ಸದ್ಭಾಷ್ಯವ ತೋರಿದ
ದೇವ ಪುರಂದರ ವಿಠಲ ಸೇವಕರಾದ ||ಗುರು||
*****