Showing posts with label ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ vijaya vittala. Show all posts
Showing posts with label ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ vijaya vittala. Show all posts

Thursday, 17 October 2019

ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ ankita vijaya vittala

ವಿಜಯದಾಸ
ಮಂದಮತಿ ನಾನಯ್ಯ ಮಂಗಳಾಂಗಾ
ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ ಪ

ಜಪತಪಗಳರಿಯೆ ಉಪವಾಸಗಳರಿಯೆ
ಕೃಪೆ ಮಾಡಲರಿಯೇ ಪರಿಜನಗಳಲ್ಲಿ
ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ
ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ 1

ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ
ಗಾತ್ರದಂಡಣಿಯ ಮಾಡಲರಿಯೆ
ಗಾತ್ರ ಲಘು ನೋಡಿ ಸ
ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ2

ಅನ್ನದಾನವರಿಯೆ ಮನ್ನಣೆ ಮಾಡಲರಿಯೆ
ಚನ್ನಾಗಿ ಬಂಧುಗಳು ಪೊರಿಯಲರಿಯೆ
ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ
ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ 3
*********