Showing posts with label ಹರೇ ಪಾಹಿ ಮಾಂ ಸದಾ ಭವದೊಳೆನ್ನ ಬಳಲಿಸಲಿ hanumesha vittala. Show all posts
Showing posts with label ಹರೇ ಪಾಹಿ ಮಾಂ ಸದಾ ಭವದೊಳೆನ್ನ ಬಳಲಿಸಲಿ hanumesha vittala. Show all posts

Tuesday, 1 June 2021

ಹರೇ ಪಾಹಿ ಮಾಂ ಸದಾ ಭವದೊಳೆನ್ನ ಬಳಲಿಸಲಿ ankita hanumesha vittala

ಲೋಕನೀತಿ

ಹರೇ ಪಾಹಿ ಮಾಂ ಸದಾ ಪ

ಭವದೊಳೆನ್ನ ಬಳಲಿಸಲಿ ತವ ಹಿತವೇನಿಹುದಿದರೊಳು

ತವಕದಿಂದ ಕೊಡು ದಯಾಳು ನವವಿಧ ಭಕುತಿ ನಿನ್ನೊಳು 1

ಲೋಕ ಪಾಲಕನೆಂಬೊ ಬಿರುದು ಈ ಕಾಲಕೆ ತೋರೊ ಒಲಿದು

ಸಾಕಲಾರೆನೆನಲು ಬಿಡದು ನೀ ಕರುಣಿಸು ದÀಯಾಸಿಂಧು 2

ಧೀರ ಶ್ರೀ ಹನುಮೇಶವಿಠಲಾ ಮೀರಿದ ಕಾರ್ಯವು ಇದಲ್ಲಾ

ಸಾರ ಮಾರ್ಗ ತೋರಿ ಸುಫಲಾ ಮಾರಜನಕ ಕೊಡು ಗೋಪಾಲ 3

****