Showing posts with label ಕೇಳೋ ಕೇಳೋ ಮನುಜನೆ ಕೇಳೊ ಕೇಳೊ others. Show all posts
Showing posts with label ಕೇಳೋ ಕೇಳೋ ಮನುಜನೆ ಕೇಳೊ ಕೇಳೊ others. Show all posts

Friday, 27 December 2019

ಕೇಳೋ ಕೇಳೋ ಮನುಜನೆ ಕೇಳೊ ಕೇಳೊ others

ಭೈರವಿ ರಾಗ ತ್ರಿವಿಡೆ ತಾಳ

ಕೇಳೋ ಕೇಳೋ ಮನುಜನೆ ಕೇಳೊ ಕೇಳೊ ||ಪ||
ಕೇಳು ಲೋಕದ ಬಾಳಿನೊಗೆತನ ಕಾಳು ಮಾಡದೆ ಬಿಡುವುದೆ
ನಾಳೆ ಯಮನಾಳುಗಳು ಬೇಗದಿ ಕಾಲ ಹಿಡಿದೆಳೆದೊಯ್ಯದಿರುವರೆ ||ಅ.ಪ||

ಕೋತಿ ಕಂಠಕೆ ರತ್ನಹಾರವ ಕೋತು ಹಾಕಲು ಬಲ್ಲುದೆ
ಪ್ರೀತಿಯಿಂದಲಿ ಕತ್ತೆ ಹಾಲೋಗರವನಿಕಲು ರುಚಿಪುದೆ
ಜಾತಿರತ್ನದ ತಕ್ಕ ಮೌಲ್ಯವ ಜಾಡನಾ ಮನ ಅರಿವುದೆ
ರೀತಿಯಿಂದಲಿ ಪೇಳ್ದ ಧರ್ಮದ ರೀತಿ ಮೂರ್ಖಗೆ ತಿಳಿವುದೆ ||೧||

ಕುರುಡನಿಗೆ ಕರ್ಪೂರ ದೀಪವ ಕಾಣಿಸಿದರವ ಕಾಂಬನೆ
ಬರಿದೆ ಕಿವುಡಗೆ ಗೀತವಾದ್ಯವ ಬಾರಿಸಲು ಅವ ಕೇಳ್ವನೆ
ಇರದೆ ಮೋಟನ ಬರೆದು ತೋರೆನೆ ಬರೆದು ತೋರಿಸಬಲ್ಲನೆ
ಕರುಣವಿಲ್ಲದವಂಗೆ ದುಃಖವ ಒರೆಯೆ ಕರುಣಿಸಲಾಪನೆ ||೨||

ನೀಚನಿಗೆ ಸಂಪತ್ತು ಬಂದರೆ ನೀಚತನವನು ಬಿಡುವನೆ
ನಾಚಿಕೆಯು ಬಿಟ್ಟಿರ್ಪ ಮನುಜನು ಹಿಂದು ಮುಂದನು ನೋಳ್ಪನೆ
ಬಾಚಿಕೊಂಬಾ ದುರುಳರಾಜನು ಬಡವನೆಂದೊಡೇ ಬಿಡುವನೆ
ಈ ಚರ್ತುರ್ಭುಜ ವಿಠ್ಠಲೇಶನು ತನ್ನವರ ಕೈ ಬಿಡುವನೆ ||೩||
********