Showing posts with label ಕರುಣದಿ ಕಾಯಬೇಕಿನ್ನು ಪ್ರಾಣೇಶ ಅರಿಯೆನೊ ಅನ್ಯರ ಜಗದ್ವಾಸ gopalakrishna vittala. Show all posts
Showing posts with label ಕರುಣದಿ ಕಾಯಬೇಕಿನ್ನು ಪ್ರಾಣೇಶ ಅರಿಯೆನೊ ಅನ್ಯರ ಜಗದ್ವಾಸ gopalakrishna vittala. Show all posts

Sunday, 1 August 2021

ಕರುಣದಿ ಕಾಯಬೇಕಿನ್ನು ಪ್ರಾಣೇಶ ಅರಿಯೆನೊ ಅನ್ಯರ ಜಗದ್ವಾಸ ankita gopalakrishna vittala

ಕರುಣದಿ ಕಾಯಬೇಕಿನ್ನು ಪ್ರಾಣೇಶ

ಅರಿಯೆನೊ ಅನ್ಯರ ಜಗದ್ವಾಸ ಪ.


ಪರಿಪರಿ ಬವಣೆಯ ಪರಿಹಾರಗೈಸುತ

ತ್ವರಿತದಿ ಸಲಹೊ ಭಾರತಿಗೀಶ ಅ.ಪ.

ಅನ್ನವಸನಗಳಿಗೆ ಅಲ್ಪರ ತೆರದೊಳು

ಬನ್ನಬಡುತಲಿರಲು

ನಿನ್ನ ಪಾದವ ನಂಬಿ ನೀ ಗತಿ ಎನುತಿರೆ

ಮನ್ನಿಸಿದ ಮಹಿಮ ನಿಸ್ಸೀಮ 1

ಮನದಿ ಬಹುನೊಂದು ನಿನ್ನ ಘನತೇನೆಂದು

ಅನುದಿನ ಕಾಯೊ ಎಂದು

ಎನುತಿರೆ ಸ್ವಪ್ನದಿ ಹನುಮ ನಿನ್ನಭಯ ಹಸ್ತ

ವನೆ ಶಿರದಿ ಇಟ್ಟೆ ಶ್ರೇಷ್ಠನೆ 2

ಉಭಯ ಹಸ್ತವು ಎನ್ನ ಶಿರದ ಮ್ಯಾಲಿಡುತಲಿ

ಅಭಯ ಕೊಡುತಲಿರಲು

ನಿರ್ಭಯದಿಂದ ನಾ ನಿನ್ನ ಭಜಿಪೆನಯ್ಯ

ಶುಭಗುಣನಿಲಯ ಜೀಯಾ 3

ಹನುಮ ಭೀಮಾನಂದ ಮುನಿಯಾಗಿ ಜಗದಲಿ

ಹನನಗೈಯುತ ದನುಜರ

ವನಜಾಕ್ಷ ಹರಿಯನು ಘನವಾಗಿ ಸೇವಿಸಿ

ಅನುದಿನದಲಿ ಕಾಯ್ವೆ ಸುಜನರ4

ಶ್ವಾಸಜಪವ ಮಾಡಿ ರಾಶಿ ಜೀವರ ಕಾಯ್ವೆ

ಶ್ವಾಸ ನಿಯಾಮಕನೆ

ಶ್ರೀಶ ಶ್ರೀ ಗೋಪಾಲಕೃಷ್ಣವಿಠ್ಠಲನಿಗೆ

ಕೂಸು ಎಂದೆನಿಸಿರುವೆ ನೀ ಕಾವೆ 5

****