ಚನ್ನಪಟ್ಟಣದ ಅಹೋಬಲದಾಸರು
ಭುವನದೊಳಗೆ ಒಬ್ಬ ಶಿವಯೋಗಿನಾ ಕಂಡೆ ಅವತರಿಸಿರುವನದ್ಯಾರಮ್ಮಾ ಪ
ತುಂಬಿ ನಡುನಾಡಿಯೊಳಗಾಡೊ ಪವನರೂಪನ ಬೇಗ ತೋರಮ್ಮಾ ಅ.ಪ
ಉಪಜೀವಿಯನು ಕಂಡು ಉಷ್ಣಶೀತವನಳಿದು ತಪಸು ಮಾಡುವನ್ಯಾರದೇಳಮ್ಮಾ ಅಪಮೃತ್ಯುವನು ಕಂಡು ಆನಂದವನು ಬಿಟ್ಟಾ ವಿಪರೀತವೇನಿದು ಹೇಳಮ್ಮಾ 1
ಬುದ್ಧಿ ಮನಸು ಚಿತ್ತ ಅದ್ವಯವನು ಮಾಡಿ ಇದ್ದನಹುದು ಆತಾ ಕಾಣಮ್ಮಾ ಮದ್ಗುರುವಾದ ಶ್ರೀ ತುಲಶಿರಾಮದಾಸ ಪರೀಕ್ಷಿತ ಕಾಣಮ್ಮಾ 2
***