Showing posts with label ತಲ್ಲಣಿಸದಿರು ಕಂಡ್ಯ ತಾಳು ಮನವೆ purandara vittala TALLANISADIRU KANDYA TAALU MANAVE p. Show all posts
Showing posts with label ತಲ್ಲಣಿಸದಿರು ಕಂಡ್ಯ ತಾಳು ಮನವೆ purandara vittala TALLANISADIRU KANDYA TAALU MANAVE p. Show all posts

Sunday 19 December 2021

ತಲ್ಲಣಿಸದಿರು ಕಂಡ್ಯ ತಾಳು ಮನವೆ purandara vittala TALLANISADIRU KANDYA TAALU MANAVE p

sung as neleyadikeshava ankita

sung as neleyadikeshava ankita

sung as neleyadikeshava ankita
raga kedaragoula  tala khandachapur
rendered by srI Ananda rAo, srIrangam
to aid learning the dAsara pada

CHECK should be by Kanakadasaru
ಪುರಂದರದಾಸರು
ತಲ್ಲಣಿಸದಿರು ಕಂಡ್ಯ ತಾಳು ಮನವೆ 
ಸ್ವಾಮಿನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ಪ

ಬೆಟ್ಟದ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆಕಟ್ಟೆ ಕಟ್ಟುತ ನೀರ ಹೊಯ್ವರಾರುಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆಕೊಟ್ಟು ರಕ್ಷಿಸುವನು ಇದಕೆಸಂದೇಹಬೇಡ1

ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆಅಡಿಗಡಿಗೆ ಆಹಾರವಿತ್ತವರದಾರುಪಡೆದ ಜನಿನಿಯಂತೆ ಸಾರಥಿಯಾಗಿ ತಾಬಿಡದೆ ರಕ್ಷಿಸುವನು ಇದಕೆ ಸಂದೇಹಬೇಡ 2

ಕಲ್ಲೊಳಗೆ ಪುಟ್ಟಿ ಕೂಗುವ ಮಂಡೂಕಂಗಳಿಗೆಅಲ್ಲಿ ಹೋಗಿ ಆಹಾರವಿತ್ತವರದಾರುಬಲ್ಲಿದನು ಪುರಂದರವಿಠಲರಾಯನಿಲ್ಲದೇ ರಕ್ಷಿಪನು ಇದಕೆ ಸಂದೇಹಬೇಡ 3
****