..
kruti by tandeshreenarahari
ಮದಲಗಟ್ಟಿ ಪ್ರಾಣನಾಥಾ ಮುದವನಿತ್ತು ಪಾಲಿಸಯ್ಯ ಪ
ಮದನಜನಕ ಮಾಧವಾನಬೋಧವಿತ್ತು ಕರುಣಿಸಯ್ಯ ಅ.ಪ.
ಪಾಪ ತಾಪ ಪೂರ ನಾವುಪಾಪ ಲೋಪ ಮೂರ್ತಿ ನೀನುದೀಪದಂತೆ ಹೊಳೆದು ಭವದಕೂಪ ದಾಟಿಸಯ್ಯಾ ಭೂಪ 1
ದೇವ ದೇವೋತ್ತಮನೆ ನೀನುಜೀವದಾನ ಮಾಡಿಸಯ್ಯಪಾವಮಾನಿ ಪರಿಕೆಸೆಮ್ಮಾನೋವನದೂರ ಮಾಡಿಸಯ್ಯಾ 2
ಅಂಧ ಬಧಿರ ಮೂರ್ಖ ಜನರುಬಂದು ನಿನ್ನ ವಂದಿಸಲುಛಂದದಿಂದ ಅವರ ದುರಿತವೃಂದವನ್ನು ನಾಶಗೈವೆ 3
ಭೂಸುರೇಂದ್ರ ವ್ಯಾಸರಿಂದಆರು ತುಂಗಾ ಹೃದವ ಬಿಟ್ಟುಭಾವಿಸುವೆ ಇಲ್ಲದೇವಆ ಸಮೀರ ಜಾತ ಶೂರ 4
ಮುದದಿನಾಥ ಜ್ಞಾನ ವಾತಾಕಂದಧೀಮಂಧ ರಾಮ ದೂತಾಹೃದಯ ಸದನದಲ್ಲಿ ತೋರೋತಂದೆಶ್ರೀನರಹರಿಯ ರೂಪ 5
***