Showing posts with label ಶ್ರೀಭಾರತೀಶನಮೋ ನಮೋ ಬಿನ್ನಪವ pranesha vittala. Show all posts
Showing posts with label ಶ್ರೀಭಾರತೀಶನಮೋ ನಮೋ ಬಿನ್ನಪವ pranesha vittala. Show all posts

Monday, 18 November 2019

ಶ್ರೀಭಾರತೀಶನಮೋ ನಮೋ ಬಿನ್ನಪವ ankita pranesha vittala

by ಪ್ರಾಣೇಶದಾಸರು
ಶ್ರೀ ಭಾರತೀಶನಮೋ ನಮೋ ಬಿನ್ನಪವ ಕೇಳು |ನಾಭಿನಂದನಚರಣಸರಸೀರುಹಭೃಂಗನಮೋ ನಮೋ ಪ

ಸಂಕರ್ಷಣನತನಯಜಡಜಂಗಮದಿ ವ್ಯಾಪ್ತ |ಶಂಕರಾದಿ ಸಮಸ್ತ ಸುರವಂದಿತ ||ಕಿಂಕರರವನೋ ನಾನು ದಯದಿ ಕರಪಿಡಿದುಭವ|ಪಂಕದೊಳಗಿಹನ ಕಡೆ ತೆಗೆಯೊ ಭಯ ಕಳಿಯೊ 1

ನೀನಲ್ಲದಾರ ಸಲಹುವರ ಕಾಣೆನೋಜೀಯ|ಭಾನುನಂದನ ರಕ್ಷದುರುಳಶಿಕ್ಷ ||ಹೀನಮತಗಳ ಸೋಲಿಸಿದ ದಕ್ಷ ಸುರಪಕ್ಷ |ದೀನಜನಮಂದಾರಪವನ ಸುಕುಮಾರಾ 2

ಪ್ರಾಣೇಶ ವಿಠಲನಿಚ್ಛಾನುಸಾರ ಧರೆಯೊಳು |ನೀನವತರಿಸಿ ಜಾತಿ ಧರ್ಮವನ್ನು ||ಜ್ಞಾನಿಗಳ ಸಮ್ಮತಾಹಂತೆ ಆಚರಿಸಿದೆಯೊ |ಮಾನಿ ಮೋಕ್ಷದನೆ ಆರೊಂದು ಸುರವಂದ್ಯ 3
*******