ಸಾರಿದೆನೋ ನಿನ್ನ ವೆಂಕಟರಮಣ ಪ
ನಾರಪ್ಪಯ್ಯನಿಗೊಲಿದು ಗೋರೂಪದಲಿ ಬಂದಿಯೊ ಅ.ಪ
ಸುಂದರ ಶುಭಕಾಯಾ ಆಕಾಶರಾಜನ
ನಂದಿನಿಯಳ ಪ್ರೀಯ
ವಂದಿಸುವೆನು ಭವಬಂಧನ ಬಿಡಿಸಯ್ಯ 1
ಕುರಕಿಹಳ್ಳಿಯ ಗ್ರಾಮದಿ ಶಿಲೆಯೊಳಗೆನಿಂದು
ವರಕೃಷ್ಣಾನದಿ ಜಲದೀ
ಅರುಣನುದಯದಲ್ಲಿ ನಿರುತ ಪೂಜೆಯಕೊಳುವಿ 2
ನೀರದ ನಿಭಕಾಯಾ ಧರೆಯೊಳುಕೃಷ್ಣಾ
ತೀರ ಕಾರ್ಪರನಿಲಯಾ
ಘೋರ ಪಾತಕಹರ ನಾರಸಿಂಹಾತ್ಮಕನೆ 3
****