ಪುರಂದರದಾಸರು
ರಾಗ ಸೌರಾಷ್ಟ್ರ ಅಟತಾಳ
ನಿನ್ನ ಮಗನು ಮುದ್ದು ನಿನಗಾದರೆ ಗೋಪಿ ಯಾರಿಗೇನೆ, ಅಮ್ಮ
ಎನ್ನ ಕೂಡೆ ತಾ ಸರಸವಾಡುತಾನೆ ಸಾರು ನೀನೆ || ಪ ||
ಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ ಹುಚ್ಚನೇನೆ, ಅಮ್ಮ
ಇಚ್ಚೆಯರಿತು ನಮ್ಮ ಗಲ್ಲವ ಕಚ್ಚುವ ನಲ್ಲನೇನೆ ||
ಚೆಂಡೆಂದು ಹೆಂಗಳ ಕುಚಗಳ ಪಿಡಿವರೆ ಗಂಡನೇನೆ, ಅಮ್ಮ
ಕಂಡಲ್ಲಿ ಉದ್ದಂಡತನವ ಮಾಡುತಾನೆ ಪುಂಡನೇನೆ ||
ಹೊಸ ಕೂಟವರಿತು ಹಾಸಿಕೆಯನು ಹಾಕುವ ಶಿಶುವು ಏನೆ, ಅಮ್ಮ
ಅಸಹಾಯಶೂರ ಪುರಂದರವಿಠಲರಾಯ ಕಾಣೆ ||
***

pallavi
ninna maganu muddu ninagAdare gOpi yArigEne amma enna kUDe tA sarasavADutAne sAru nInE
caraNam 1
heccina satiyara kacceya biccuva huccanEnE amma icceriyatu namma gallava kaccuva nallanEnE
caraNam 2
ceNDendu hengaLa kucagaLa piDivare gaNDanEnE amma kaNDalli uddaNDa tanava mADutAne puNDanEnE
caraNam 3
hosa kUDavaridu hAsikeyanu hAkuva shishuvu Ene amma asahAya shUra purandara viTTalarAya kANe
***
ನಿನ್ನ ಮಗನ ಮುದ್ದು ನಿನಗಾದರೆ ಗೋಪಿ ಆರಿಗೇನೆ? |ಎನ್ನ ಕೂಡ ಸರಸವಾಡಲು ಓರಗೆಯೇನೆ? ಪ
ಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ ಹುಚ್ಚನೇನೆ?-ಅಮ್ಮ |ಇಚ್ಛೆಯರಿತು ನಮ್ಮ ಗಲ್ಲವ ಕಚ್ಚುವ ನೆಚ್ಚನೇನೆ? 1
ಚೆಂಡೆಂದು ಮಿಂಡೆಯರು ದುಂಡು ಕುಚವ ಪಿಡಿವ ಗಂಡನೇನೆ? |ಕಂಡಕಂಡಲ್ಲಿ ಉದ್ದಂಡವ ಮಾಡುವ ಪುಂಡನೇನೆ 2
ಹೊಸ ಕೂಟವರಿತು ಹಾಸಿಗೆಯನು ಹಾಕುವ ಶಿಶುವು ಏನೆ? |ಅಸಹಾಯ ಶೂರ ಶ್ರೀ ಪುರಂದರವಿಠಲರಾಯ ಕಾಣೆ 3
*********