Showing posts with label ಬಂದೆನೇಳೆ ಗೋವಿಂದ ನಾ ಇಂದುಮುಖಿ prasannavenkata. Show all posts
Showing posts with label ಬಂದೆನೇಳೆ ಗೋವಿಂದ ನಾ ಇಂದುಮುಖಿ prasannavenkata. Show all posts

Thursday, 14 November 2019

ಬಂದೆನೇಳೆ ಗೋವಿಂದ ನಾ ಇಂದುಮುಖಿ ankita prasannavenkata

by ಪ್ರಸನ್ನವೆಂಕಟದಾಸರು
ಬಂದೆನೇಳೆ ಗೋವಿಂದ ನಾ ಇಂದುಮುಖಿ ನಿದ್ರೆ ಬಿಟ್ಟುಬಂದು ನೀ ಬಾಗಿಲ ತೆಗೆಯೆ ಗೋವಿಂದ ನೀ ಗೋವೃಂದವ ಕಾಯಲು ಹೋಗಯ್ಯ ಪ.

ಸೋಮಕ ಖಳನ ಕೊಂದು ನೇಮದಿ ವೇದವ ತಂದಶ್ರೀ ಮತ್ಸ್ಯಾವತಾರ ಬಂದೆನೆ ಮತ್ಸ್ಸ್ಯನಾದರೆಆ ಮಹಾಂಬುಧಿಗೆ ಹೋಗಯ್ಯ 1

ಸಿಂಧುಮಥÀನ ಕಾಲಕೆ ವೃಂದಾರಕರಿಗÉೂಲಿದಸುಂದರ ಕೂರ್ಮನು ಬಂದೆನೆ ಕೂರ್ಮನಾದರೆಮಂದರಹೊರಲು ಹೋಗಯ್ಯ2

ಪ್ರಳಯಾಂಬುಗಿಳಿದೊಬ್ಬನ ಸುಲಭದಿ ಕೋರೇಲಿ ಸೀಳಿದಚೆಲುವ ವರಾಹನು ಬಂದೆನೆ ವರಾಹನಾದರೆಇಳೆಯ ಕೂಡಾಡ ಹೋಗಯ್ಯ 3

ಸೊಕ್ಕಿ ಕಂಬವ ಗುದ್ದ್ದಿದ ರಕ್ಕಸನಂತರ ಮಾಲೆಯನಿಕ್ಕಿದ ನರಹರಿ ಬಂದೆನೆ ನರಹರಿಯಾದರೆಚಿಕ್ಕವನೊಳಾಡ ಹೋಗಯ್ಯ 4

ಹೋಮವ ಮಾಡಿ ಮೀರಿದ ಭೂಮಿಪನುಕ್ಕ ಮುರಿದನೇಮದ ವಾಮನ ಬಂದೆನೆ ವಾಮನನಾದರೆನೇಮ ನಿಷ್ಠೆಗೆ ನೀ ಹೋಗಯ್ಯ 5

ಭೂಭಾರವನಿಳುಹಿ ದ್ವಿಜರ್ಗೆ ಭಾಗ್ಯವ ಕೊಟ್ಟ ಶೌರ್ಯಶೋಭಿತಭಾರ್ಗವಬಂದೆನೆ ಭಾರ್ಗವನಾದರೆಆ ಬಾಲೇರಂಜಿಸ ಹೋಗಯ್ಯ 6

ಸೀತೆಗಾಗಿ ರಾವಣನ್ನ ಘಾತಿಸಿದೆ ಕೇಳೆವಾತಜಾತ ವಂದ್ಯ ರಾಮ ಬಂದೆನೆ ರಾಮನಾದರೆ ಸರಯೂ ತೀರದಲ್ಲಿರ ಹೋಗಯ್ಯ 7

ಸೋಳಸಾಸಿರ ಗೋಪೇರನಾಳುವ ಪ್ರೌಢ ಕಾಣೆ ಗೋಪಾಲ ಚೂಡಾಮಣಿ ಬಂದೆನೆ ಗೋಪಾಲನಾದರೆ ಗೋಪಾಲೇರೊಡನಾಡ ಹೋಗಯ್ಯ 8

ದೃಢದಲ್ಲಿ ತಪವಿದ್ದ ಮಡದೇರ ಮನಗೆದ್ದಕಡುಮುದ್ದು ಬುದ್ಧ್ದ ಬಂದೇನೆ ಬುದ್ಧನಾದರೆ ಮಿಥ್ಯದಸಡಗರದಲ್ಲಿರ ಹೋಗಯ್ಯ 9

ಪದ್ಮಗಂಧಿ ನಿನ್ನ ರತಿಗೊದಗಿದೆ ಬಿಂಕವಿನ್ನ್ಯಾಕೆಕುದುರೆಯೇರಿ ಕಲ್ಕಿ ಬಂದೆನೆ ಕಲ್ಕಿಯಾದರೆಕದನಕೆ ಜಾಣ ಹೋಗಯ್ಯ 10

ವಲ್ಲಭನ ನುಡಿಕೇಳಿ ನಲ್ಲೆ ಸತ್ಯಭಾಮೆಪಾದಪಲ್ಲವಕೆರಗಿ ನಿಂತಳು ಪ್ರಸನ್ವೆಂಕಟಚೆಲುವ ನೀನೆಂದರಿಯೆನೆಂದಳು 11
*******