Showing posts with label ಕೋಲು ಹಾಡು ಕೋಲು ಮುಕ್ತಿ ಮಾರ್ಗದ prasannavenkata. Show all posts
Showing posts with label ಕೋಲು ಹಾಡು ಕೋಲು ಮುಕ್ತಿ ಮಾರ್ಗದ prasannavenkata. Show all posts

Monday, 11 November 2019

ಕೋಲು ಹಾಡು ಕೋಲು ಮುಕ್ತಿ ಮಾರ್ಗದ ankita prasannavenkata

by ಪ್ರಸನ್ನವೆಂಕಟದಾಸರು
ಕೋಲುಹಾಡುಕೋಲು ಮುಕ್ತಿ ಮಾರ್ಗದ ಕೋಲು ದುಷ್ಟಶಾಸನಕೋಲು ಸುಖತೀರ್ಥಯತಿರಾಯನ ಕರದಂಡುಕೋಲು ಕೋಲೆ ಪ.

ಕಂಬುಗೇಹನ ಸೀಳ್ದ ಕಲ್ಲ ಬೆನ್ನಲಿ ತಾಳ್ದಕುಂಭಿನಿತಂದ ಕಂಬದಿ ಬಂದನಮ್ಮಯ್ಯಕೊಂಬುವರಿಲ್ಲ ತ್ಯಾಗವೆಂಬ ಬಲಿಯೊತ್ತಿದಡಂಬಕಕ್ಷತ್ರೇರ ಕಂಠದರಿ ನೋಡಮ್ಮಯ್ಯ1

ಅಂಬುಧಿಯ ದಾಟಿದ ರಂಭೆರೊಳೋಲ್ಯಾಡಿ ದಿಗಂಬರ ತಿರುಗಿ ಪಶುವೇರಿದ ನಮ್ಮಯ್ಯಅಂಬುಜಜಾಂಡ ಒಳಕೊಂಬ ಒಡಲ ಚೆಲುವಕೊಂಬು ಕೊಳಲೂದುವರ್ಥಿಯ ನೋಡಿರಮ್ಮಯ್ಯ 2

ಸರ್ವಜÕರಾಯನ ಪೂರ್ವದ್ವಾದಶಸ್ತವನಕೋರ್ವನೆ ಮೆಚ್ಚಿ ಉಡುಪಿಲಿ ನಿಂದನಮ್ಮಯ್ಯಉರ್ವಿಗುಬ್ಬಸ ಮತವ ಪೂರ್ವಪಕ್ಷವ ಮಾಡಿದಸರ್ವೇಶ ಪ್ರಸನ್ವೆಂಕಟ ಕೃಷ್ಣ ಕಾಣಮ್ಮಯ್ಯ 3
*******