Showing posts with label ನೀನು ಸರ್ವಜ್ಞನಾಗಿರಲು ನಿನ್ನಲಿ ಜನರು ಜಾಣತನ prasanna NEENUSARVAJNA NAAGIRALU NINNALI JANARU JAANATANA. Show all posts
Showing posts with label ನೀನು ಸರ್ವಜ್ಞನಾಗಿರಲು ನಿನ್ನಲಿ ಜನರು ಜಾಣತನ prasanna NEENUSARVAJNA NAAGIRALU NINNALI JANARU JAANATANA. Show all posts

Tuesday, 14 December 2021

ನೀನು ಸರ್ವಜ್ಞನಾಗಿರಲು ನಿನ್ನಲಿ ಜನರು ಜಾಣತನ ankita prasanna NEENUSARVAJNA NAAGIRALU NINNALI JANARU JAANATANA



ವಿದ್ಯಾಪ್ರಸನ್ನತೀರ್ಥರು

ನೀನು ಸರ್ವಜ್ಞನಾಗಿರಲು 

ನಿನ್ನಲಿ ಜನರು ಜಾಣತನ ತೋರಲಾಗುವುದೆ ಪವಮಾನ ಪ 


ಪ್ರಾಣಪತೇ ನಿನ್ನೊಲುಮೆ ಪಡೆದು ಸುಜನರು ದಿವ್ಯ ಸ್ಥಾನಗಳ ಪೊಂದಿ ಇಹಪರದಿ ಸುಖಿಸುವರು ಅ.ಪ ಧರ್ಮಯೋನಿಯ ಶಾಸನಗಳ ಸಂರಕ್ಷಣೆಯ ಕರ್ಮ ನಿನಗಲ್ಲದನ್ಯರಿಗೆ ತರವೆ ಕಿಮ್ಮೀರ ಕೀಚಕ ಜರಾಸಂಧ ಮೊದಲಾದ ಧರ್ಮಘಾತಕರ ಸದೆ ಬಡಿದ ಬಲಭೀಮ 1 


ಜ್ಯೇóಷ್ಠನೆಂಬುವ ಮಮತೆ ತೊರೆದು ಧೈರ್ಯದಲಿ ಧೃತ ರಾಷ್ಟ್ರನಿಗೆ ಕಿಲುಬು ಕಾಸನು ಕೊಡದೆಲೆ ಭಾಗವತ ಧರ್ಮಗಳ ಹಂಚುವ ಹರಿಗೆ ಪ್ರೇಷ್ಟತಮ ನೀನಲ್ಲದನ್ಯರಾರಿಹರೊ 2 


ನಿನ್ನ ಮತವೇ ಸಿರಿಯರಮಣನಿಗೆ ಸಮ್ಮತವು ನಿನ್ನ ದಯವೇ ಸಾಧು ಜನಕೆ ಅಭಯ ನಿನ್ನ ಮಾರ್ಗವ ನಂಬಿ ಧನ್ಯರಾಗುವರಲಿ ಪ್ರ ಸನ್ನನಾಗುವ ಹನುಮ ಭೀಮ ಮಧ್ವೇಶ 3

****