ವಿದ್ಯಾಪ್ರಸನ್ನತೀರ್ಥರು
ನೀನು ಸರ್ವಜ್ಞನಾಗಿರಲು
ನಿನ್ನಲಿ ಜನರು ಜಾಣತನ ತೋರಲಾಗುವುದೆ ಪವಮಾನ ಪ
ಪ್ರಾಣಪತೇ ನಿನ್ನೊಲುಮೆ ಪಡೆದು ಸುಜನರು ದಿವ್ಯ ಸ್ಥಾನಗಳ ಪೊಂದಿ ಇಹಪರದಿ ಸುಖಿಸುವರು ಅ.ಪ ಧರ್ಮಯೋನಿಯ ಶಾಸನಗಳ ಸಂರಕ್ಷಣೆಯ ಕರ್ಮ ನಿನಗಲ್ಲದನ್ಯರಿಗೆ ತರವೆ ಕಿಮ್ಮೀರ ಕೀಚಕ ಜರಾಸಂಧ ಮೊದಲಾದ ಧರ್ಮಘಾತಕರ ಸದೆ ಬಡಿದ ಬಲಭೀಮ 1
ಜ್ಯೇóಷ್ಠನೆಂಬುವ ಮಮತೆ ತೊರೆದು ಧೈರ್ಯದಲಿ ಧೃತ ರಾಷ್ಟ್ರನಿಗೆ ಕಿಲುಬು ಕಾಸನು ಕೊಡದೆಲೆ ಭಾಗವತ ಧರ್ಮಗಳ ಹಂಚುವ ಹರಿಗೆ ಪ್ರೇಷ್ಟತಮ ನೀನಲ್ಲದನ್ಯರಾರಿಹರೊ 2
ನಿನ್ನ ಮತವೇ ಸಿರಿಯರಮಣನಿಗೆ ಸಮ್ಮತವು ನಿನ್ನ ದಯವೇ ಸಾಧು ಜನಕೆ ಅಭಯ ನಿನ್ನ ಮಾರ್ಗವ ನಂಬಿ ಧನ್ಯರಾಗುವರಲಿ ಪ್ರ ಸನ್ನನಾಗುವ ಹನುಮ ಭೀಮ ಮಧ್ವೇಶ 3
****
No comments:
Post a Comment