ಒಂದು ಮೂರುತಿಯಲ್ಲಿ ಹರಿಹರ ದೇವರಿಬ್ಬರು
ಬಂದು ನೆಲೆಗೊಂಡುದನ ಕಂಡೆನದ್ಭುತವ
ಭಾವಜನ ಪಿತನೊಬ್ಬ ಅವನ ಕೊಂದವನೊಬ್ಬ
ಹಾವ ತುಳಿದವನೊಬ್ಬ ಧರಿಸಿದವನೊಬ್ಬ
ಗೋವ ಕಾಯಿದವನೊಬ್ಬ ಅದನೇರಿದವನೊಬ್ಬ
ಭಾವಿಸಲು ವಿಪರೀತಚರಿತರಂತಿರ್ದು
ಯಾಗಪಾಲಕನೊಬ್ಬ ಯಾಗಭಂಜಕನೊಬ್ಬ
ನಾಗರಕ್ಷಕನೊಬ್ಬ ನಾಗಶಿಕ್ಷಕನೊಬ್ಬ
ಈಗ ನಲ್ಲಳಿಗರ್ಧದೇಹವನಿತ್ತ ಶಿವನಂತೆ
ಭೋಗದೊಳು ಹೊಂದಿದ ಹಯವದನ ಬಲ್ಲ
****