ಪಾಹಿ ಮಂಗಳದೇವಿ ರುಕ್ಮಿಣಿ ಪಾಹಿ ಪಂಕಜ ಮಾಲಿನಿಪಾಹಿಮಾಂ ಕರವೀರವಾಸಿನಿ ಪಾಹಿ ರಾಘವ ಕಾಮಿನಿ ಪ
ಚಂದ್ರಮಂಡಲ ಹಾಸ ಸನ್ಮುಖ ಮಂದಹಾಸ ಸುಶೋಭಿತೆಸಿಂಧುರೇಂದ್ರ ಕರಾಮೃತೌಘ ಸುಗಂಧ ಬಿಂದು ನಿಷೇಚಿತೆಕುಂದರೋಜ್ವಲ ಇಂದ್ರನೀಲ ಮಣೀಂದ್ರಹಾರ ವಿಲಾಸಿತೇಬಂದ್ರಿರಾಜಸುತೇವ ಸೂನುಮನಾದಿ ಬಂಧ ವಿವರ್ಜಿತೇ 1
ಕುಂತಲಾವಳಿ ಸೋಭಿಸನ್ಮುಖ ಕಾಂತೆ ತೋಷಿತೆ ಮಾಧವೆಶಾಂತ ಭಕ್ತೆ ಉಪಾಸೆ ತೋರು ಕೃತಾಂತ ದುರ್ಭರ ವೈಭವೇಕಂತು ಮೋತರನಂತಶಾಯಿ ಸದಾಂತ ಪಾಣಿ ಸರೋರುಹೇಸಂತತಂ ಹೃದಮೇವ ಸಾಂಬ ಸುಶಾಂತಿ ಕಾಂತಿ ಸಹೋದ್ಭವೆ 2
ನಾರದಾಮರ ಮೌನಿದತ್ತ ಸುಪಾರಿಜಾತ ಸುಮಾಲಿಕೇಸೂರ್ಯ ಸೋಮ ಸಮಾನ ಕಾಂಚನ ಭೂರಿಭೂಷಣ ಮಸ್ತಕೇಹಾರಮೌಕ್ತಿಕ ಹೇಮಭೂಷಣ ಚಾರು ಚಂಪಕ ನಾಸಿಕೆ ಸಾರಸಾಕ್ಷಿ ಸಮೀರ ಪೂರ್ವಕ ಸುರಾಳಿ ಮೌಳಿಗ ಹಸ್ತತೇ 3
ತಪ್ತಕಾಂಚನ ನೂಪುರೋಜ್ವಲ ರಕ್ತಪಾಲ ಸರೋರಹೆಚಿತ್ರಪೇಟ ಪಟೋಲ್ಲ ಸತ್ಕಟೆ ರತ್ನ ಕಾಂಚಿ ಗುಣೋದ್ಭವೇನಿತ್ಯತೃಪ್ತ ನಿರಂಜನೈಸುರ ಮೃತ್ಯುಮೋಹನ ವಿಗ್ರಹೆತತ್‍ಕೃಪೈವಪು ಮೃತ್ಯುಸಾಧನ ಸಪ್ತ ಮೋಡಿಹ ವಿದ್ಮಹೆ 4
ಅಂಬಜಾವಕ ಲಕ್ಷ್ಮೀ ಮೇಷ ಕದಂಬಿನೀನಿಲಯಸ್ಥಿತೆಕಂಬುಕಂಜರ ತಾರಿಬೇಟ ಕರಾಂಬು ಸಂಭವ ಸೇವಿತೆಶಂಭರಾರಿ ಸುತಾಂಘ್ರಿಪಂಕಜೆ ಬಿಂಬರಾಹಿ ಭೂಸುತೆಸಾಂಬಹೀಂಬ ನಿಹಾ ಸುದರ್ಶಯ ಜಂಜವೈರಿನಿ ಸೇವಿತೆ 5
ಇಂದಿರೆ ಹರಿ ಮತ್ಸ ಮಯೂರೇಂದ್ರ ತಲ್ಪ ಸುಶಾಯಿನಂಸಿಂಧುಮಂದಿರ ಸಾರಸಾಕ್ಷನು ಮಂದ ಸೌಭಗ ಶಾಲನಂವಂದ್ಯ ಮಾನ ವಿದೇಂದ್ರ ದೈವತ ವೃಂದ ವೈಭವದಾಯಿನಂಸುಂದರಾಂಗಿಣಿ - ನಿವೇದಗೇಹ ಭವಾಂಧಿ ಪೋಪನೀ ಶೋರ್ಪಣಂ 6
ಜೀವವರ್ಗ ಹೃದಾಲಯ ಸ್ಥಿತ ಭೂವರಾಹಸಹಾನನೇಪಾವನೀತಾಹೇ ವಸೇದ್ರುಮ ಹಾನು ಭಾವ ಶಿಖಾಮಣಿಹಾವಭಾವ ವಿಲಾಸಿನಾಕಿ ಸುವಾಸಿನಿನುತ ಸದ್ಗುಣಿಸೇವಕೇಯ ವಿಭಾವಿತಾಖಿಲ ಭಾವಕಾಯದ ಶಿಕ್ಷಣಿ 7
ಇಂದಿರೇಶ ಸತೀಂದುಮೌಳಿ ಕರಾರವಿಂದ ನಿಷೇವಣೇಚಂದ್ರಮಾರುತರೇಂದು ಸೈಂದವವೀಂದ್ರ ಪೂರ್ವಸು ವಾಹನೇಅಂಧಕೂಪ ಸಮಾನ ದುರ್ಭವ ಬಂಧ ಸೇಘನೀ ಪೋಷಿಣಿನಂದನಂದನ ಮಾಸುದರ್ಶಯ ಬಂಧುರಾಮೃತ ಭಾಷಿಣಿ 8
****