Showing posts with label ವಾಯು ಕುಮಾರಗೆ ಮಂಗಳ ರಘು purandara vittala. Show all posts
Showing posts with label ವಾಯು ಕುಮಾರಗೆ ಮಂಗಳ ರಘು purandara vittala. Show all posts

Friday, 6 December 2019

ವಾಯು ಕುಮಾರಗೆ ಮಂಗಳ ರಘು purandara vittala

ಪುರಂದರದಾಸರು
ವಾಯುಕುಮಾರಗೆ ಮಂಗಳ ರಘು - |ರಾಯಸೇವಕಗೆ ಮಂಗಳ ಪ.

ಅಂಜನಿಗರ್ಭಸಂಜಾತಗೆ ಮಂಗಳ |ರಂಜಿತ ದಿವ್ಯ ಮೂರ್ತಿಗೆ ಮಂಗಳ ||ಮಂಜುಳ ಕೀರ್ತಿ ಮಾಹತ್ಮ್ಯಗೆ ಮಂಗಳ |ಸಂಜೀವರಾಯಗೆ ಮಂಗಳ 1

ದನುಜನಿಕರ ಸಂಹಾರಗೆ ಮಂಗಳ |ಜಾನಕಿಶೋಕ ವಿನಾಶಗೆ ಮಂಗಳ ||ವನಧಿ ವಿರೋಧಿಗೆ ಮಂಗಳ ಜಯ |ಹನುಮವಿಲಾಸಗೆ ಮಂಗಳ 2

ಸೇತುವೆಗಟ್ಟಿದಾತಗೆ ಮಂಗಳ |ಸೀತೆಯ ತಂದ ಬಂಟಗೆ ಮಂಗಳ ||ಖ್ಯಾತ ಪುರಂದರವಿಠಲನ ಕರುಣೆಗೆ |ಪಾತ್ರನಾದ ಭಕುತೆಗೆ ಮಂಗಳ 3
*********