Showing posts with label ಕೌಶಿಕೋತ್ಸವ ನೋಡುವ ಜನರಿಗೆ ಕಣ್ಗಳೆರಡು ಸಾಲದು ಕೌಶಿಕೋತ್ಸವ ಗೀತೆ venkatakrishna. Show all posts
Showing posts with label ಕೌಶಿಕೋತ್ಸವ ನೋಡುವ ಜನರಿಗೆ ಕಣ್ಗಳೆರಡು ಸಾಲದು ಕೌಶಿಕೋತ್ಸವ ಗೀತೆ venkatakrishna. Show all posts

Tuesday, 1 June 2021

ಕೌಶಿಕೋತ್ಸವ ನೋಡುವ ಜನರಿಗೆ ಕಣ್ಗಳೆರಡು ಸಾಲದು ಕೌಶಿಕೋತ್ಸವ ಗೀತೆ ankita venkatakrishna

by yadugiriyamma 

ಕೌಶಿಕೋತ್ಸವ ಗೀತೆ

ಕೌಶಿಕೋತ್ಸವ ನೋಡುವ ಜನರಿಗೆ ಕಣ್ಗಳೆರಡು ಸಾಲದು ಪ.

ಕಾರ್ತೀಕ ಶುದ್ಧ ಏಕಾದಶಿಯಲ್ಲಿ ಕಂ
ದರ್ಪಜನಕನು ಪೊರಟುಬಂದು
ಶಂತನುಮಂಟಪದಲಿ ಮಜ್ಜನ ಮಾಡಿ
ಎಂದಿನಂದದಿ ತನ್ನ ಮಂದಿರಕೆ ನಡೆದನು1
ನಿತ್ಯಕರ್ಮವನೆಲ್ಲ ಗ್ರಹಿಸಿ ರಂಗಸ್ವಾಮಿ
ಅರ್ತಿಯಿಂದಲೆ ನೀರಾಡಿ ಎದ್ದು
ಭಕ್ತರೆಚ್ಚರಿಕೆ ಪರಾಕು ಎಂದೆನುತಿರೆ
ಅರ್ತಿಯಿಂದಲೆ ಬಂದ ಅರ್ಜುನಮಂಟಪಕೆ 2
ಮಂಟಪದಲಿ ಶ್ರೀರಂಗನಿರೆ ವ್ಯಾಸ
ಭಟ್ಟರು ಬಂದು ಪುರಾಣ ಪೇಳೆ
ಮುನ್ನೂರುಅರವತ್ತು ವಲ್ಲಿಗಳನ್ನು ಧರಿಸಿ
ಮು[ನ್ನ]ಸೇವೆಯನಿತ್ತ ಮೋಹನರಂಗನ 3
ಕರಿಯಕುಲಾವಿ ಕುತ್ತನಿಅಂಗಿ ವಜ್ರ
ದರಳೆಲೆ ಮುತ್ತುಗಳಲುಗಾಡುತಾ ಕರ್ಣ
ಕುಂಡಲ ಹಾರ ಪದಕಗಳ್ಹೊಳೆಯುತ
ಪಡಿಯನೇರಿ ಬಂದ ಕರ್ಪೂರಧೂಳಿಯಿಂದ 4
ನೋಡಿದ ಅಗ್ನಿ ನಾಲ್ಕು ಕಣ್ಗಳಿಂದ ಬಂದು
ನೋಡಿದ ರುದ್ರ ಹತ್ತು ಕಣ್ಗಳಿಂದ
ನೋಡಿದ ಇಂದ್ರ ಸಹಸ್ರಕಣ್ಗಳಿಂದಲೆ ಹರಿಯ
ನೋಡಿದನೆಂಟು ಕಣ್ಗಳಿಂದ ಬ್ರಹ್ಮ ವೆಂಕಟರಂಗನ 5
***