Showing posts with label ಪ್ರಾಣರಾಯ ನೀನಲ್ಲದೆ ಮತ್ತನ್ಯ ಪ್ರಾಣರು ಜಗದೊಳುಂಟೇ shreeshapranesha vittala. Show all posts
Showing posts with label ಪ್ರಾಣರಾಯ ನೀನಲ್ಲದೆ ಮತ್ತನ್ಯ ಪ್ರಾಣರು ಜಗದೊಳುಂಟೇ shreeshapranesha vittala. Show all posts

Sunday, 1 August 2021

ಪ್ರಾಣರಾಯ ನೀನಲ್ಲದೆ ಮತ್ತನ್ಯ ಪ್ರಾಣರು ಜಗದೊಳುಂಟೇ ankita shreeshapranesha vittala

 ..

kruti by shreeshapranesha vittala dasaru


ಪ್ರಾಣರಾಯ ನೀನಲ್ಲದೆ ಮತ್ತನ್ಯ |ಪ್ರಾಣರು ಜಗದೊಳುಂಟೇ ||ದೀನರಕ್ಷಕನೆಂಬ ಬಿರುದಿಗೆ | ಪ್ರೇಮಾದಿ (ಪ್ರೇಮದಿ)ನೀನೆ ರಕ್ಷಿಸಬೇಕೈ ಪರಾಕೈ ಪ


ಹಿಂದೆ ಭಕುತರನು ಪೊರೆದನಂಬುದು ಕೇಳಿ |ಬಂದು ವಂದಿಸುವೆ ನನ್ನ ||ಕಂದನ ಅಪರಾಧ ನೀನೆಣಿಸದೆ ಭವ |ಬಂಧನ ಪರಿಹರಿಸೋ ಉದರಿಸೋ 1


ವಂದಿಪ ಶರಣರ ಪೊರೆಯಬೇಕೆನುತಲಿ |ಬಂದು ಬಾಗಿಸೋಪಿಲಿ ||ಛಂದದಿ ವನದೊಳು ನಿಂದಾದಲತ ಗೋ |ವಿಂದರಾಯವಲದೀ ನೀ ನಲಿದೀ 2


ಈಸು ಮಹಿಮೆಯನು ತುತಿಸಲು ಖಗಪಾರ್ವ |ತೀಶರಿಗಸದಳವೈ ||ಶ್ರೀಶ ಪ್ರಾಣೇಶ ವಿಠಲದ ದಾಸಾಗ್ರಣಿ |ಈ ಸಮಯದಿ ಪಾಲಿಸೋ, ಲಾಲಿಸೋ 4

***