Showing posts with label ವಸುದೇವ ಸುತನೆ ಬಾರೋ ವಸುಧೆಪಾಲಾ sirigurutandevarada vittala. Show all posts
Showing posts with label ವಸುದೇವ ಸುತನೆ ಬಾರೋ ವಸುಧೆಪಾಲಾ sirigurutandevarada vittala. Show all posts

Friday 6 August 2021

ವಸುದೇವ ಸುತನೆ ಬಾರೋ ವಸುಧೆಪಾಲಾ ankita sirigurutandevarada vittala

   ..

Kruti by ಸಿರಿಗುರುತಂದೆವರದವಿಠಲರು sirigurutandevarada vittala 


ವಸುದೇವ ಸುತನೆ ಬಾರೋ ವಸುಧೆಪಾಲಾ ಪ.


ಶಿಸುತನದಲಿ ಕಡು ವಿಷದ ಮೊಲೆಯನುಂಡುಅಸುವನೆ ಹೀರಿದ ಶಿಸುಗಳರಸ ರಂಗಾ 1


ಗೊಲ್ಲತೆಯರ ಮನೆ ಮೆಲ್ಲಮೆಲ್ಲನೆ ಪೊಕ್ಕುಗುಲ್ಲುಮಾಡುತ ಪಾಲ್ ಮೊಸರು ಬೆಣ್ಣೆಯ ಕದ್ದು 2


ವೇಣುವನೂದುತ ಗಾನವ ಮಾಡುತಜಾಣೆಯನೊಲಿಸಿದ ಜಾಣ ಶ್ರೀಕೃಷ್ಣ 3


ತುರುವು ಕಾಯಲು ಪೋಗೆ ವರುಷವ ಸುರಿಸಲುಬೆರಳಲಿ ಬೆಟ್ಟವ ನಿರಿಸಿ ಗೋವ್ಗಳ ಕಾಯ್ದ 4


ಕಾಳೀಯ ಮೆಟ್ಟುತ ನಲಿನಲಿದಾಡುತಲೀಲೆಯ ತೋರಿದ ಬಾಲಾಗೋಪಾಲಾ 5


ಬಿಲ್ಲನೆ ಮುರಿಯುತ ಮಲ್ಲರ ಗೆದೆಯುತಖುಲ್ಲ ಕಂಸನ ಕೊಂದ ಪುಲ್ಲನಾಭಗೊಲ್ಲ 6


ತಂದೆವರದ ವಿಠಲಾ ತಂದೆ ತಾಯ್ಗಳ ಬಿಡಿಸಿತಂದು ತೋರಿದ ಅರವಿಂದನಯನ ಶೌರಿ 7

****