Showing posts with label ನೋಡಬನ್ನಿರೋ ಜನರು ಶ್ರೀ ಕೃಷ್ಣನ varaha timmappa. Show all posts
Showing posts with label ನೋಡಬನ್ನಿರೋ ಜನರು ಶ್ರೀ ಕೃಷ್ಣನ varaha timmappa. Show all posts

Friday, 27 December 2019

ನೋಡಬನ್ನಿರೋ ಜನರು ಶ್ರೀ ಕೃಷ್ಣನ ankita varaha timmappa

(ರಾಗ ಪೂರ್ವಿ ಅಟತಾಳ )

ನೋಡ ಬನ್ನಿರೋ ಜನರು, ಶ್ರೀ ಕೃಷ್ಣನ
ಜೋಡು ದೀವಟಿಗೆ ಸೇವೆ ||ಪ||

ನೋಡಿಯ ನಮ್ಮಯೆ ಮನದ ಇಷ್ಟಾರ್ಥವ
ಬೇಡಿ ಶರಣು ಪೊಗುವ ಪದಯುಗವ ||ಅ||

ಅಂಜಿಕೆ ಪರಿಹರ ಅಸುರ ಭಂಜನನಾದ
ಕಂಜಾಕ್ಷ ಶ್ರೀ ಕೃಷ್ಣನಿದಿರೊಳು ನಿಂದು
ಸಂಜೆಯ ವೇಳ್ಯದಿ ರಾಜಿಪ ರಜತದ
ಪಂಜುಸೇವೆಯ ಕರಾಂಜಲಿಯನೆ ಮುಗಿದು ||

ನೆರೆದ ಜನರ ಮುಂದೆ ಗುರುರಾಯ ತಾ ಬಂದು
ಕರವ ಮುಗಿದು ನಿಂದಿರುತಿಪ್ಪ ಸಮಯದಿ
ಪರಿಪರಿ ವಿನಿಯೋಗದವರೆಲ್ಲ ತಾವ್ತಮ್ಮ
ಸರತಿ ತಪ್ಪದೆ ಬಂದು ಇರುತಿಪ್ಪ ಸೊಬಗನು ||

ಪಂಚ ಮುಖದ ಜ್ಯೋತಿ ಬೆಳಗಲು ಎಡಬಲ
ಸಂಚರಿಸುವ ಪೊಮ್ಮರಿ ಮೃಗ ಚೌರಿಯ
ಕಾಂಚನಮಯದ ಕಟ್ಟಿಗೆ ಕೋಲ ಹಸುವಿನ(/ಹಸುರಿನ?)
ಲಾಂಛನವಾದಗೆ ಹಾಕುವ ಪರಿಯ ||

ಬಟ್ಟಲ ವೀಳ್ಯ ವಿಶಿಷ್ಟ ಲಾಜಾಕ್ಷತೆ
ಪುಟ್ಟ ಕದಳಿ ಬೆಲ್ಲ ಕಸ್ತೂರಿಗಳಿಂದ
ಕೃಷ್ಣರಾಯನ ಮುಂದಿಟ್ಟು ಸಮರ್ಪಿಸಿ ಹೊ-
ತ್ತಿಟ್ಟ ಆರತಿ ಶ್ರೇಷ್ಠರೆತ್ತುವುದನ್ನು ||

ದೇವದೇವೋತ್ತಮ ದೇವೇಶನೆನುತಲಿ
ಭಾವಶುದ್ಧದಿ ಭಕ್ತರು ಸ್ತುತಿಗೈಯ್ಯುತ್ತ
ಗೋವಳರಾಯನೆ ಜಯಶೀಲನಾಗೆಂದು
ಗೋವಿಂದ ಎನುತಲೆ ಘೋಷ ಮಾಳ್ಪುದನು ||

ಭಯನಿವಾರಣ ಭಕ್ತ ದುರಿತನಿವಾರಣ
ಹರಿ ಕೃಷ್ಣ ಪರದೈವ ಪರಮಪುರುಷನೆಂದು
ಸ್ಮರಣೆಯಿಂದಲಿ ಮನವೆರಸಿ ವಂದಿಸಿ ತ-
ಚ್ಚರಣವ ನೋಡಿಯೆ ಕರುಣಪಡೆವರೆ ||

ಮಧ್ವ ರಾಯರ ಮತಕದ್ವೈತನಾಗಿಯೆ
ಸಿದ್ಧವಾಗಿಹ ಫಲವೆದ್ದು ತೋರಿದ ತೆರ
ಉದ್ದರಿಸಿವೆನೆಂಬ ಪುರಂದರವಿಠಲ**
ಮುದ್ದು ಶ್ರೀ ಕೃಷ್ಣನ ಮೂರುತಿ ಮಹಿಮೆಯ ||

** ಇಲ್ಲಿ ಅಂಕಿತವು ಪುರಂದರವಿಠಲ ಎಂದಿರುವದಾದಾದರೂ ಇದು 'ವರಾಹ ತಿಮ್ಮಪ್ಪ' ಅಂಕಿತವನ್ನು ಬಳಸುವ 'ನೆಕ್ಕರ ಕೃಷ್ಣದಾಸ'ರ ರಚನೆ
***

pallavi

nODa bannirO janaru shrI krSnana jODu dIvaTige sEve

anupallavi

nODiya nammaya manada iSTArttava bEDi sharaNu poguva padayugava

caraNam 1

anjike parihara asura bhanjananAda kanjAkSa shrI krSNanidiroLu
nindu sanjeya vELyadi rAjipa rajatada panju sEveya karAnjalaiyane mugidu

caraNam 2

nereda janara munde gururAya tA bandu karava mugidu nindirutippa samayadi
pari pari viniyOgadavarella tam tamma saradi tappade bandu irutippa sobaganu

caraNam 3

panca mukhada jyOti beLagalu eDabala sancarisuva pommari mrga cauriya
kAncanamayada kaTTige kOla hasuvina lAnchanavAdage hAkuva pariya

caraNam 4

paTTala vILya vishiSTa lAjAkSate puTTa kadaLi bella kastUrigaLinda
krSNarAyana mundiTTU samarpisi hottiTTa Arati shrESTarettuvadannu

caraNam 5

dEva dEvOttama dEvEshanutali bhAva shuddhadi bhaktaru stutigeyyutta
gOvaLarAyane jayashIlanAgendu gOvinda enutale ghOSa mALpudanu

caraNam 6

bhaya nivAraNa bhakta durita nivAraNa hari krSNa paradaiva parama puruSanendu
smaraNeyindali manaverasi vandisi taccaraNava nODiye karuNa baDevare

caraNam 7

madhva rAyara matakadvaitanAgiye siddhavAgiha phalaveddu tOrada tera
uddarisivenemba purandara viTTala** muddu shrI krSNana mUruti mahimeya
***