ಕಾಖಂಡಕಿ ಶ್ರೀ ಮಹಿಪತಿರಾಯರು
ಏನು ಹೇಳಲಿ ನಿನಗ ಮನವೇ ನಾ ಇನ್ನೇನು ಹೇಳಲಿ ನಿನಗೆ ಶ್ರೀನಾಥನಂಘ್ರಿಯ ನೀನೋಲೈಸದಿಹುದೇನೋ ಪ
ಮನುಷ್ಯದೇಹ ಧರಿಸಿ ಸದ್ಗತಿಯ | ಜ್ಞಾನದಾರಿ ತ್ಯಜಿಸಿ ನೀ ಭಕುತಿ ಸುಖ | ಖೂನವಿಲ್ಲದೆ ಚರಿಸಿ | ಏನೂ ಇಲ್ಲದೆ ವಿದ್ಯಾ ಮಾಟಕ ಭ್ರಮಿಸಿಹುದೇನಾ 1
ವಿಷಯ ಸುಖ ಹರಿದು ಸಂಸಾರದಿ | ನಿಶಿದಿನದಲಿ ಸವೆದು ತಾಪತ್ರಯ | ಘಸಣಿಯೊಳಗ ಕುದಿದು | ಪಶುವಿನ ಪರಿಯಲಿ ಯಚ್ಚರ ಮರೆದಿಹುದೇನಾ 2
ಇನ್ನಾರೆ ಹಿತವರಿಯೋ ಸದ್ಗುರುವಿನ | ಮನ್ನಿಸಿ ಗತಿ ಪಡಿಯೋ ಹರಿಯ ನಾಮವಾ | ಚನ್ನಾಗಿ ನಂಬಿ ನಡಿಯೋ | ಸನ್ನುತ ಮಹಿಪತಿ ಬೋಧಾಮೃತ ಸವಿಯದೇನಾ 3
***