..
kruti by ಲಕ್ಷ್ಮೀನಾರಯಣರಾಯರು Lakshminarayanaru
ವಾರಿಧಿ ಸಂಭೂತೆ ಚಾರು ಗುಣಾನ್ವಿತೆ ಪ
ನಾರಾಯಣಹಿಗೆ ಪಾಲಿಸೆ ಮಾತೆ ಅ.ಪ.
ಸತ್ಯ ಸುಖಾಸ್ಪದೆ ಭೃತ್ಯರ ಬಿಡದೆ
ನಿತ್ಯದಿ ಪೊರೆವುದೆ ಅತಿಶಯ ಬಿರುದೆ 1
ನಿನ್ನ ಕೃಪಾಶ್ರಯ ಪಡೆಯೆ ಮಹಾಶಯ
ನಿನ್ನ ನಿರಾಶ್ರಯ ತಾಪತ್ರಿತಯ 2
ಲಕ್ಷುಮಿ ಕಾಂತನ ವಕ್ಷ ನಿವಾಸಿನಿ
ಈಕ್ಷಿಸಿ ಕರುಣದಿ ರಕ್ಷಿಸು ಜನನಿ 3
***