Showing posts with label ಸತ್ಯಬೋಧರಾಯಾ ಪಾಲಿಸು ನಿನ್ನ ಭೃತ್ಯರ ನನ ಜೀಯಾ hanumesha vittala satyabodha teertha stutih. Show all posts
Showing posts with label ಸತ್ಯಬೋಧರಾಯಾ ಪಾಲಿಸು ನಿನ್ನ ಭೃತ್ಯರ ನನ ಜೀಯಾ hanumesha vittala satyabodha teertha stutih. Show all posts

Tuesday, 1 June 2021

ಸತ್ಯಬೋಧರಾಯಾ ಪಾಲಿಸು ನಿನ್ನ ಭೃತ್ಯರ ನನ ಜೀಯಾ ankita hanumesha vittala satyabodha teertha stutih

 ಸತ್ಯಬೋಧರಾಯಾ ಪಾಲಿಸು (ನಿನ್ನ) ಭೃತ್ಯರ ನನ ಜೀಯಾ

ಸತ್ಯಪ್ರೀಯರ ಸುಪುತ್ರನಾಗಿ ಪುರುಷೋತ್ತಮನೊಲಿಸಿದ

ಸ್ತುತ್ಯ ಸುಕಾಯ ಪ

ದೂರ ನೋಡದಲೆನ್ನ ಗುರುವರ ಪಾರಗೈಪುದು ಮುನ್ನ

ಶ್ರೀ ರಮಾರಮಣನಾರಾಧಕರೊಳು ಧೀರ ನಿನಗೆ ಸರಿಯಾರಿಹರಯ್ಯ 1

ಮತ್ತನಾಗಿಹೆ ನಾನು ಭವದಲಿ ಸತ್ತು ಹುಟ್ಟುತಲಿಹೆನು

ಚಿತ್ತಕೆ ತರದಲೆನ್ನವಗುಣಗಳ ಮತ್ತೆ ಕೈಪಿಡಿಯುತಲೆತ್ತುವುದು 2

ಶರಣು ಶರಣು ದೊರೆಯೆ ಕರುಣದಿ ಪೊರೆದನ್ಯರನರಿಯೇ

ಕರುಣಾಕರ ಸಿರಿ ಹನುಮಯ್ಯನ ಪದ ಚರಣಾಂಬುಜ

ಮಧುಕರನಾಗಿರುತಿಹ 3

****