ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿಗೆರಗೀ ತರಣೋಪಾಯವನರಿಯಲಿಲ್ಲಾ ಮನವೇ | ಮರುಳನೋ ತರಳನೋ ಬಲು ದುರುಳನು ನಾನರಿಯೇ ಪ
ಶ್ರೀನಾಥನಂಘ್ರಿ ಕಮಲಾ ಧ್ಯಾನವಿಲ್ಲ ಮನವೇ | ಮಾನವನಫ ದಾನವನೋ ನೀದನವೇನೋ ನಾನರಿಯೇ 1
ರತಿಯ ಬಿಟ್ಟು ವಿಷಯದಲ್ಲಿ ಗತಿಯಾ ಜರದೀ ಮನವೇ | ಹಿತವೇನೋ ಮಿತವೇನೋ ಉನ್ಮತವೇನೋ ನಾನರಿಯೇ 2
ಪೊಡವಿಯೊಳು ನರದೇಹವ ವಿಡಿದು ಬಂದೆ ಮನವೇ | ನಡಿದೇನೋ ನುಡಿದೇನೋ ಸುಖಪಡಿದೇನೋ ನಾನರಿಯೆ 3
ಭಕ್ತಿ ಜ್ಞಾನಾ ಬಲಿವಾ ಸುವಿರಕ್ತಿ ಇಲ್ಲಾ ಮನವೇ | ಸಕ್ತನೋ ಯುಕ್ತನೋ ಆಯುಕ್ತನೋ ನಾನರಿಯೆ 4
ಗುರು ಮಹಿಪತಿ ಪ್ರಭು ಶರಣರ ಕಾಯ್ದಾ ಮನವೇ | ನರವರನೋ ಸುರವರನೋ ಕಲ್ಪತರು ವರನೋ ನಾನರಿಯೆ 5
****