..
kruti by Srida Vittala Dasaru Karjagi Dasappa
ಸಾಕಯ್ಯ ಸಾಕು ಸಾಕಯ್ಯ ನಮ-
ಗ್ಯಾಕಯ್ಯ ಇನ್ನವಿವೇಕ ಸಂಗತಿ ಪ
ಬುದ್ಧಿ ಶೂನ್ಯರಿಗೆ ಬುದ್ಧಿಯನು ಹೇಳಲು
ಮದ್ದಾನೆ ಮೈತೊಳೆವಂತಾಯಿತು 1
ಮರುಳ ಜನರಿಗೆ ಧರ್ಮವನರುಹಲು
ಕುರುಡಗೆ ಕನ್ನಡಿ ತೋರಿದಂತಾದಿತು 2
ಶ್ರೀದವಿಠಲನೆಂದಜ್ಞಾನಿಗೆ
ಬೋಧಿಸೆ ಬೋರ್ಗಲ್ಲ ಮುಂದೆ ವದರಿದಂತಾಯಿತು 3
***