ಬಿಡದೆ ಭಜಿಸೊ ಮನವೆ ದೃಢಭಾವದಿ ಪೂರಿಸೊ ಶ್ರೀಪಾದಾರಾಧಿಸೊ ಪ
ನಿತ್ಯಾನಿತ್ಯ ಆವದೆಂದುದ್ದಿತ್ಯರ್ಥ ಶೋಧಿಸೊ ಪಥ್ಯವಾಗುವ ಸತ್ಯಶಾಖತ್ವಪಥವ ಸಾಧಿಸೊ ಕೃತ್ಯಾಕೃತ್ಯವಾಗುವ ನಿತ್ಯನಿಜವು ಭೇದಿಸೊ ಉತ್ತಮೋತ್ತಮವಾದ ವಸ್ತುಮಯದೊಳು ನೀ ಸಂಧಿಸೊ 1
ಇದೆ ನೋಡು ಹಿತವು ನಿನ್ನು ಸುಪಥಸಾಧÀನ ಸಾಧಿಸಿಗೊಡುವ ಸ್ವಾಮಿ ಸದ್ಗುರು ಪತಿತಪಾವನ ಭೇದಿಸಿ ನೋಡಲಕ್ಕೆ ನಿನ್ನೊಳಗಾಗುವದು ಉನ್ಮನ ತಾಂ ನಿಧಾನ 2
ಬೆರಿಯೊ ಭಾವಭಕುತಿವಿಡಿದು ಹಿಡಿಯೊ ಹರಿ ಪಾದವ ಸಾರ ಸವಿಯೊ ಸುಖವ ಅನಭವಾಮೃತವ ಹರಿಯೊ ಪಾಶ ಬೀಳುವ ಭವಜನ್ಮಮೃತ್ಯುವ ನೆರಿಯೊ ಮಹಿಪತಿಸ್ವಾಮಿ ವಸ್ತು ಪರಾತ್ಪರವ 3
***