Showing posts with label ಕೈಗೂಡಿಸು ಬಯಕೆ ರಂಗಾಕೈಗೂಡಿಸು ಬಯಕೆ prasannavenkata. Show all posts
Showing posts with label ಕೈಗೂಡಿಸು ಬಯಕೆ ರಂಗಾಕೈಗೂಡಿಸು ಬಯಕೆ prasannavenkata. Show all posts

Monday, 11 November 2019

ಕೈಗೂಡಿಸು ಬಯಕೆ ರಂಗಾಕೈಗೂಡಿಸು ಬಯಕೆ ankita prasannavenkata

by ಪ್ರಸನ್ನವೆಂಕಟದಾಸರು
ಕೈಗೂಡಿಸು ಬಯಕೆ ರಂಗಾಕೈಗೂಡಿಸು ಬಯಕೆ ಪ.

ಸಂತೆಯ ಬಳಗದ ಸಂಗತಿನೀಗಿಸಂತರ ಪದಪಲ್ಲವ ನೆಳಲಾಗಿಚಿಂತನೆ ಮೂರುತಿ ಚಿಂತನೆಗೊದಗಿಪ್ರಾಂತದ ಪಯಣ ಮನೋರಮವಾಗಿ 1

ಚೆನ್ನಿಗ ಮೈಸುಟ್ಟರಿವ್ಯೆಂತಾಗಿಛಿನ್ನಾಗುವ ಮೈಯಂಜಿಕೆನೀಗಿನನ್ನ ರೂಹು ನನಗಿದ್ದಂತಾಗಿಚಿನ್ಮಯ ಬಿಂಬದ ಒಲುಮ್ಯೆನಗಾಗಿ 2

ಬಯಲಿಗೆ ಬಿನ್ನಹವ ಮಾಡ್ಯೇನುಬಯಸುವಪರಿನೀಡುವ ದೊರೆ ನೀನುಭಯವಿಲ್ಲದೆ ಮೊರೆ ಹೊಕ್ಕೆನು ನೀಡಾಭಯವರದ ಪ್ರಸನ್ವೆಂಕಟ ಪ್ರೌಢಾ 3
*******