Showing posts with label ರಂಭೆ ಊರ್ವಸಿ ರಮಣಿಯರೆಲ್ಲರು purandara vittala. Show all posts
Showing posts with label ರಂಭೆ ಊರ್ವಸಿ ರಮಣಿಯರೆಲ್ಲರು purandara vittala. Show all posts

Friday, 6 December 2019

ರಂಭೆ ಊರ್ವಸಿ ರಮಣಿಯರೆಲ್ಲರು purandara vittala

ಪುರಂದರದಾಸರು
ರಂಭೆ ಊರ್ವಸಿ ರಮಣಿಯರೆಲ್ಲರು ||ಚೆಂದದಿಂ ಭರತನಾಟ್ಯವ ನಟಿಸೆ |ಝಂತಕ ತಕಧಿಮಿ ತದಿಗಣತೋಂ ಎಂದು |ಝಂಪೆತಾಳದಿ ತುಂಬುರನೊಪ್ಪಿಸೆ ||ಧಾಪಮಪಧಸರಿ ಎಂದು ಧ್ವನಿಯಿಂದ |ನಾರದ ತುಂಬುರು ಗಾನವ ಮಾಡಲು |ನಂದಿಯು ಚೆಂದದಿ ಮದ್ದಲೆ ಹಾಕಲು 1

ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು |ಫಣಘಣಿಸುತ ನಾಟ್ಯವನಾಡೆ |ದಿನಪಮಂಡಲದಂತೆ ಪೊಳೆಯುವ ಮುಖದೊಳು ||ಚಲಿಸುತ ನೀಲಕೇಶಗಳಾಡೆ |ಕಾಲಲಂದಿಗೆ ಗೆಜ್ಜೆ ಘುಲುಘುಲು ಘುಲುಘುಲು |ಘುಲುರೆಂದು ಉಡಿಗೆಜ್ಜೆ ಗಂಟೆಗಳಾಡೆ ||ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ |ಪುಟ್ಟಿ ಪಾದವನು ಇಟ್ಟ ಶ್ರೀಕೃಷ್ಣನು |ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು 2

ಸುರರುಪುಷ್ಪದ ವೃಷ್ಟಿಯ ಕರೆಯಲು |ಸುದತಿಯರೆಲ್ಲರು ಪಾಡಲು |ನಾಗಕನ್ನೆಯರು ನಾಥನ ಬೇಡಲು |ನಾನಾವಿಧ ಸ್ತುತಿ ಮಾಡಲು ||ರಕ್ಕಸರೆಲ್ಲರು ಕಕ್ಕಸವನೆ ಕಂಡು |ದಿಕ್ಕಿದಿಕ್ಕುಗಳಿಗೋಡಲು ||ಚಿಕ್ಕವನಿವನಲ್ಲ ಪುರಂದರವಿಠಲ |ವೆಂಕಟರಮಣನ ಬೇಗ ಯಶೋದೆ |ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ 3
**********