Showing posts with label ಹರೇ ವೆಂಕಟ ಶೈಲ ವಲ್ಲಭ ಪೊರೆಯಬೇಕು rangavittala HARE VENKATA SHAILA VALLABHA POREYABEKU. Show all posts
Showing posts with label ಹರೇ ವೆಂಕಟ ಶೈಲ ವಲ್ಲಭ ಪೊರೆಯಬೇಕು rangavittala HARE VENKATA SHAILA VALLABHA POREYABEKU. Show all posts

Wednesday 11 December 2019

ಹರೇ ವೆಂಕಟ ಶೈಲ ವಲ್ಲಭ ಪೊರೆಯಬೇಕು ankita rangavittala HARE VENKATA SHAILA VALLABHA POREYABEKU





csrchs


ಹರೇ ವೆಂಕಟ ಶೈಲ ವಲ್ಲಭ
ಪೊರೆಯಬೇಕು ಎನ್ನ || ಪ ||
ದುರಿತದೂರ ನೀ ನಲ್ಲದೆ ಧರೆಯೊಳು
ಪೊರೆವರ ನಾ ಕಾಣೆ ನಿನ್ನಾಣೆ || ಅ.ಪ ||

ಆರು ನಿನ್ನ ಹೊರೆತೆನ್ನ ಪೊರೆವರು
ನೀರಜಾಕ್ಷ ಹರಿಯೆ
ಅಪಾರಾ ಮಹಿಮ ಪುರಾಣ ಪುರುಷ
ಘೋರ ದುರಿತಗಳ ದೂರ ಮಾಡಿಸೋ || ೧ ||

ಇಂದಿರೇಶ ಅರವಿಂದನಯನ
ಎನ್ನ ತಂದೆ ತಾಯಿ ನೀನೆ
ಪೊಂದಿದವರ ಅಘವೃಂದ ಕಳೆವ
ಮಂದರಾದ್ರಿಧರನೇ ಶ್ರೀಧರನೆ || ೨ ||

ಮಂಗಳಾಂಗ ಮಹನೀಯ ಗುಣಾರ್ಣವ
ಗಂಗೋದಿತ ಪಾದ
ಅಂಗ ಜಪಿತ ಅಹಿರಾಜಶಯ್ಯ ಶ್ರೀ
ರಂಗವಿಠಲ ದೊರೆಯೆ ಶ್ರೀಹರಿಯೆ || ೩ ||
***

harE veMkaTa Saila vallabha
poreyabEku enna || pa ||
duritadoora nee nallade dhareyoLu
porevara naa kaaNe ninnaaNe || apa ||

Aru ninna horetenna porevaru
neerajaakSha hariye
apaarA mahima purANa puruSha
ghOra duritagaLa doora maaDisO || 1 ||

iMdirESa araviMdanayana
enna taMde tAyi nIne
poMdidavara aghavRuMda kaLeva
maMdaraadridharanE Sreedharane || 2 ||

maMgaLAMga mahanIya guNArNava
gaMgOdita paada
aMga japita ahirAjaSayya Sree
raMgaviThala doreye Sreehariye || 3 ||
***

Hare venkata shaila vallabha paaliso nee enna || pa ||

Durita doora neenallade dhareyolu | porevara naa kaane, ninnaane || a. Pa. ||

Indiresha aravinda nayana enna | tande taayi neene |
ponmdidavara&gha vrunda kaleva |
shree mandaraadri dharane shreedharane || 1 ||


Aaru ninna horatennanu kaayvaru neerajaaksha hariye |
ghora duritagala doora maadisuva |
apaara mahima doreye shree hariye || 2 ||

Mangalaanga mahaneeya gunaarnava gangodita paada |
angaja pita ahi raajashayana |
siri rangaviththaladoreye shree hariye || 3 ||
***


ಹರೇ ವೆಂಕಟಶೈಲ ವಲ್ಲಭ
ಪೊರೆಯಬೇಕು ಎನ್ನ ||ಪ||

ದುರಿತದೂರ ನೀನಲ್ಲದೆ ಧರೆಯೊಳು
ಪೊರೆವರ ನಾ ಕಾಣೆ ನಿನ್ನಾಣೆ ||ಅ.ಪ||

ಆರು ನಿನ್ನ ಹೊರತೆನ್ನ ಪೊರೆವರು
ನೀರಜಾಕ್ಷ ಹರಿಯೆ ಅ-
ಪಾರಮಹಿಮ ಪುರಾಣಪುರುಷ
ಘೋರ ದುರಿತಗಳ ದೂರ ಮಾಡಿಸೋ ||೧||

ಇಂದಿರೇಶ ಅರವಿಂದನಯನ ಎನ್ನ
ತಂದೆ ತಾಯಿ ನೀನೆ
ಹೊಂದಿದವರ ಅಘವೃಂದ ಕಳೆವ
ಮಂದರಾದ್ರಿಧರನೇ ಶ್ರೀಧರನೆ ||೨||

ಮಂಗಳಾಂಗ ಮಹನೀಯ ಗುಣಾರ್ಣವ
ಗಂಗೋದಿತ ಪಾದ
ಅಂಗಜಪಿತ ಅಹಿರಾಜಶಯ್ಯ ಶ್ರೀ
ರಂಗವಿಠಲ ದೊರೆಯೇ ಶ್ರೀ ಹರಿಯೇ ||೩||
***
*