ಶ್ರೀ ಕೂರ್ಮ ಜಯಂತಿ ವೈಶಿಷ್ಟ್ಯ
ಕರ್ಮ ಸಾಧನ ಮಾಡೊ ಮರ್ಮವ ತಿಳಿಯಲು ಕೂರ್ಮ ದೇವರ
ನೆನೆಯೋ ಧರ್ಮ ಮಾರ್ಗದಿ ನಡೆದು ಸರ್ವ ಸಂಪನ್ನನಾಗಿ ಊರ್ವಿಯೊಳು ಬಾಳೋ||ಪಲ್ಲ||
ಕೂರ್ಮ ದೇವನ ಭಜಿಸಲು ನರಕದ ಬಾಧೆ ತಪ್ಪುವುದೊ
ಕೂರ್ಮ ದೇವನ ಸ್ಮರಣೆ ಮಾಡೆ ಪಾಪಗಳು ಪರಿಹಾರ||೧||
ಪಂಚ ಮಹಾ ಪಾತಕಗಳ ಪಾಪವನ್ನ ಕಳೆಯಲು
ಪಾಪ ಲೇಪವಾಗದಂತೆ ಕೂರ್ಮದೇವನ ಸ್ಮರಿಸಿರೊ||೨||
ಅಮೃತ ಮಥನ ಕಾಲದಲ್ಲಿ ಪರ್ವತವು ಮುಳಗುತಿರಲು
ಕೂರ್ಮರೂಪನಾಗಿ ದೇವ ಬೆನ್ನ ಮೇಲೆ ಎತ್ತಿ ಹಿಡಿದ||೩||
ಕರ್ಮ ಸಾಧನ ಮಾಡಲು ಕೂರ್ಮನನ್ನ ನೆನೆದು
ಜ್ಞಾನವೃಧ್ಧಿಯಾಗಲು ವೆದವ್ಯಾಸರನ್ನ ಭಜಿಸು||೪||
ವಿಘ್ನಗಳು ಬಾರದಂತೆ ನರಸಿಂಹದೇವರನ್ನ ಸ್ತುತಿಸೆ ನಿ
ರ್ವಿಘ್ನದಿಂದ ನಡೆಸುವ ಮಧ್ವೇಶಕೃಷ್ಣ ತಾನು||೫||
***