..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ಬಳೆಯ ತೊಡಿಸಿದ ಭಾಗ್ಯಪುರುಷನೂ ನಳಿನಾಕ್ಷಿಕೈಗೆ ಪ
ತರುಣಿ ಮಣಿ ಕರಗಳಿಗೆ ತಕ್ಕ ಅರುಣಮಯ1
ಬಳೆಗಳನೆ ತಂದು
ಶರಣಪಾಲಕ ತಾನೆ ಬಂದು ವನಜಮುಖಿ
ಕರಗಳನೆ ಪಿಡಿದು 1
ಇಳೆಯಪತಿ ಬಳೆಗಾರನಾಗುತ ಪೊಳಲು ಎಲ್ಲ ಸಂಚರಿಸುತ
ನಳಿನಮುಖಿಯ2 ಕಂಡು ನಗುತಲಿ
ಸರಳತನದಲಿ ಕರವ ಪಿಡಿದು3 2
ಮಾನನಿಧಿ ಪ್ರಾಣನಾಥವಿಠಲನುಸಾನುರಾಗದಿಭಜಿಸುವರ ಸುರ
ಧೇನು ವಂದದಿ ಸಲಹುವನಂತೆ ಮಾನಿನಿಯಮನಕೆ ಒಪ್ಪುವೊ 3
***