Showing posts with label ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈ ನೀಯನ್ನ gurumahipati DATTATREYA SWAMI KRUPE MAADAI NEE YENNA. Show all posts
Showing posts with label ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈ ನೀಯನ್ನ gurumahipati DATTATREYA SWAMI KRUPE MAADAI NEE YENNA. Show all posts

Thursday, 2 December 2021

ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈ ನೀಯನ್ನ ankita gurumahipati DATTATREYA SWAMI KRUPE MAADAI NEE YENNA

 ಕಾಖಂಡಕಿ ಶ್ರೀ ಕೃಷ್ಣದಾಸರು

ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈ ನೀಯನ್ನ ಮ್ಯಾಲ ಪ 

ಅನಿಮಿಷಮಾನಸ ಸಂಚಾರಾ ಅನಾಥ ಜನ ಸಂಕಟ ಪರಿಹಾರಾ 

ದೀನ ದಯಾಲ ರಮಾವರಾ ನೆನೆವರ ಸಹಕಾರಾ 1 

ಅನಸೂಯಾಕರ ಸಂಪುಟರನ್ನಾ ಘನತರ ಚರಿತ ಪರಮ ಪಾವನ್ನಾ ಅನುಪಮ ತ್ರೈಜಗ ಜೀವನ್ನಾ ವನರುಹವದನಾ2 

ಸರಸಿಜೋದ್ಭವ ನುತ ಮನ್ನಾಥಾ ವರ ನಿಗಮಾ ಗೋಚರ ಅನಂತಾ ಕರುಣಾಂಬುಧಿಯೇ ಸರ್ವಾತೀತಾ ಗುರು ಮಹಿಪತಿ ದಾತಾ3

****