ರಾಗ ಕಾಂಭೋಜ ಆದಿತಾಳ
ದೀನರಕ್ಷಕನೆ ನಿನ್ನ ಧ್ಯಾನವೇನೋ ವಿಟ್ಠಲ
ಏನನಿತ್ತು ಮೆಚ್ಚಿಸುವೆನೋ ನಿನ್ನ ವಿಟ್ಠಲ ||
ಓದಿ ನಿನ್ನ ಮೆಚ್ಚಿಸುವೆನೊ ವೇದವ ಅಜಗೆ ಇತ್ತೆ
ಓದಿಸಿ ಮೆಚ್ಚಿಸುವೆನೊ ವರಶೇಷಶಯನ ನಿನ್ನ ||
ಪಾಡಿ ನಿನ್ನ ಮೆಚ್ಚಿಸುವೆನೊ ಪವನಜ ಸ್ವಾಮಿ ನೀನೆ
ಆಡಿಸಿ ಮೆಚ್ಚಿಸುವೆನೊ ಹರನಯ್ಯನಯ್ಯ
ಚಿನ್ನವಿಟ್ಟು ಮೆಚ್ಚಿಸುವೆನೊ ಶ್ರೀದೇವಿಯರಸನೆ
ಪೂರ್ಣಾನಂದ ಸ್ವಾಮಿ ನೀನೆ ಪುರಂದರವಿಠಲ ನಿನ್ನ ||
********
ದೀನರಕ್ಷಕನೆ ನಿನ್ನ ಧ್ಯಾನವೇನೋ ವಿಟ್ಠಲ
ಏನನಿತ್ತು ಮೆಚ್ಚಿಸುವೆನೋ ನಿನ್ನ ವಿಟ್ಠಲ ||
ಓದಿ ನಿನ್ನ ಮೆಚ್ಚಿಸುವೆನೊ ವೇದವ ಅಜಗೆ ಇತ್ತೆ
ಓದಿಸಿ ಮೆಚ್ಚಿಸುವೆನೊ ವರಶೇಷಶಯನ ನಿನ್ನ ||
ಪಾಡಿ ನಿನ್ನ ಮೆಚ್ಚಿಸುವೆನೊ ಪವನಜ ಸ್ವಾಮಿ ನೀನೆ
ಆಡಿಸಿ ಮೆಚ್ಚಿಸುವೆನೊ ಹರನಯ್ಯನಯ್ಯ
ಚಿನ್ನವಿಟ್ಟು ಮೆಚ್ಚಿಸುವೆನೊ ಶ್ರೀದೇವಿಯರಸನೆ
ಪೂರ್ಣಾನಂದ ಸ್ವಾಮಿ ನೀನೆ ಪುರಂದರವಿಠಲ ನಿನ್ನ ||
********