ಕಾಖಂಡಕಿ ಶ್ರೀ ಕೃಷ್ಣದಾಸರು
ರಾಗ - : ತಾಳ -
ಬಾರಯ್ಯಾ ಗೋವಿಂದಾ l ಬಾರೋ ನಂದನ ಕಂದಾ ll ಪ ll
ಕನಕಗರ್ಭನ ತಂದೆ l ಕನಕಮೃಗನ ಕೊಂದೆ l
ಕನಕಾಂಬರಧರ l ಕನಕನಯನ ಹರ l
ಕನಕವಕ್ಕಿಗಮನ l ಕನಕಾಭರಣ ll ೧ ll
ಹರಿಯಾನಂದನ ಕೊಲಿಸಿ l ಹಿರಿಯಾನಂದನನುಳಿಸಿ l
ಹರಿಯಾ ಸುತನುತ l ಹರಿಯಾ ರಿಪುಸುತ l
ಹರಿಯೇ ಬಾಯೆನೆ ಹರಿಯಾದೆ ll ೨ ll
ಗೋಕುಲವರಾಧಾರಾ l ಗೋಕುಲ ವಿಹಾರಾ l
ಗೋಕರ್ಣ ಶಯನಾ l ಗೋಕೋಟಿ ತೇಜಾ l
ಮಹಿಪತಿ ಸುತ ಪ್ರಭು ಗೋಪಾಲಾ ll ೩ ll
***
ಬಾರಯ್ಯಾ ಗೋವಿಂದಾ | ಬಾರೋ ನಂದನ ಕಂದಾ ಪ
ಕನಕಗರ್ಭನ ತಂದೆ | ಕನಕಮೃಗವ ಕೊಂದೆ | ಕನಕಾಂಬರಧರ | ಕನಕನಯನ ಹರ | ಕನಕವಕ್ಕಿಗಮನ | ಕನಕಾಭರಣ1
ಹರಿಯಾನಂದನ ಕೊಲಿಸಿ | ಹಿರಯಾನಂದನನುಳಿಸಿ | ಹರಿಯಾ ಸುತನುತ | ಹರಿಯಾ ರಿಪುಸುತ | ಹರಿಯೇ ಬಾಯೆನೆ ಹರಿಯಾದೆ 2
ಗೋಕುಲವರಾಧಾರಾ | ಗೋಕುಲ ವಿಹಾರಾ | ಗೋಕರ್ಣ ಶಯನಾ | ಗೋಕೋಟಿ ತೇಜಾ | ಮಹಿಪತಿ ಸುತ ಪ್ರಭು ಗೋಪಾಲಾ 3
***