..
kruti by ಲಕ್ಷ್ಮೀನಾರಯಣರಾಯರು Lakshminarayanaru
ನಾಮಕೆಣೆ ಕಾಣೆ ಮುಕುಂದನ ಪ
ಶ್ರೀ ಮನೋರಮ ಸುರಸ್ತೋಮವಿನುತ ನಾಮ
ಕಾಮಿತಪ್ರದ ನಾಮ ಮುಕುಂದನ 1
ಕೆಟ್ಟ ಕಿರಾತನು ಮುಟ್ಟಿ ಭಜಿಸಿ ತಾನು ಉ-
ತ್ಕøಷ್ಟ ಮುನಿಯಾದನು ಮುಕುಂದನ 2
ಘೋರ ನಾರಕಿಗಳು ನಾರಾಯಣನೆಂದು
ಸೂರೆಗೊಂಡರು ಸ್ವರ್ಗವ ಮುಕುಂದನ 3
ನಾರಣ ಬಾರೆಂದು ಚೀರಲು ಅಜಾಮಿಳ
ಸೇರಿದನಾಪುವರ್ಗವ ಮುಕುಂದನ 4
ಲಕ್ಷ್ಮೀಕಾಂತನ ನಾಮೋಚ್ಚಾರದಿ ದ್ರೌಪದಿ
ರಕ್ಷಿತೆಯಾದಳಿಂದು ಮುಕುಂದನ 5
***