ಆವ ಕಾರಣ ಮೊಗವ ತಿರುಹಿದ್ಯೋ ಪೇಳೋ
ಭೂವರಾಹಸ್ವಾಮಿ ಪುಷ್ಕರಿಣಿ ತೀರಗನೆ ||ಪ||
ರಥಸಮೂಹಗಳೇರಿ ಪ್ರಕಾಶಿಪ ಬಗೆಯೊ
ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೊ
ಮಿತಿಯಿಲ್ಲದಸುರರ ಉಪೇಕ್ಷೆ ಮಾಡುವ ಬಗೆಯೊ
ಪತಿತಪಾವನ ಪೂರ್ಣಕಾಮ ನಿನಗೆ ನುತಿಸಿ ಬಿನ್ನೈಸುವೆನು ಪೇಳೊ ||೧||
ಭಜಕರೆನ್ನನು ಬಿಡರೆಂಬ ಮನಸಿನ ಬಗೆಯೊ
ಅಜಭವಾದಿಗಳ ಸಂಸ್ತುತಿಗಳಾಲಿಪ ಬಗೆಯೊ
ರಜನೀಚರರ ಸದೆದು ನಾಟ್ಯವಾಡುವ ಬಗೆಯೊ
ಭುಜಗಭೂಷಣಪೂಜ್ಯಚರಣ ತ್ರಿಜಗದ್ವಿಲಕ್ಷಣ ಸುರೂಪನಿರ್ಲೇಪ ||೨||
ಅನುಗರೊಶ ನೀನಾದಡೆಮ್ಮನು ಮರೆವರೆಂದು
ವನಿತೆಗಾರರಿಯದಂತುಪದೇಶಿಸುವ ಬಗೆಯೊ
ಘನಲಕ್ಷಣಮುಖಾಬ್ಜವನು ಚುಂಬಿಸುವ ಬಗೆಯೊ
ವನಜಸಂಭವನಾಸ್ಯಜನೆ ಜಗಜ್ಜನಕ ಜಗನ್ನಾಥವಿಠಲ ||೩||
***
Avakarana mogava tiruhidyo pelu
Buvaraha svamipushkaranitiragane ||pa||
Rathasamuhagaleri prakasipa bageyo
Satiya lavanyatisayava noduva bageyo
Mitiyilladasurara upekshe maduva bageyo
Patitapavana purnakama ninage
Nutisi binnaisuvenu pelo ||1||
Bajakarennanu bidaremba manasina bageyo
Ajabavadigala samstutigalalipa bageyo
Rajanicarara sadedu natyavaduva bageyo
Bujagabushanapujyacarana
Trijagadvilakshana surupanirlepa ||2||
Anugarosa ninadademmanu marevarendu
Vanitegarariyadantupadesisuva bageyo
Ganalakshanamukabjavanu cumbisuva bageyo
Vanajasambavanasyajane jaga
Jjanaka jagannathavithala ||3||
***
Ava karana mogava tiruhidyo pelo
bhuvarahasvami pushkarini tiragane ||pa||
Rathasamuhagaleri prakashipa bageyo
satiya lavanyatishayava noduva bageyo
mitiyilladasurara upekshe maduva bageyo
patitapavana purnakama ninage nutisi binnaisuvenu pelo ||1||
Bhajakarennanu bidaremba manasina bageyo
ajabhavadigala sanstutigalalipa bageyo
rajanicharara sadedu natyavaduva bageyo
bhujagabhushanapujyacharana
trijagadvilakshana surupanirlepa ||2||
Anugarosha ninadademmanu marevarendu
vanitegarariyadantupadeshisuva bageyo
ghanalakshana mukhabjavanu chumbisuva bageyo
Vanajasambhavanasyajane jagajjanaka jagannathavittala ||3||***
ಆವ ಕಾರಣ ಮೊಗವ ತಿರುಹಿದ್ಯೋ ಪೇಳು
ಭೂವರಾಹ ಸ್ವಾಮಿಪುಷ್ಕರಣೀತೀರಗನೆ ।।ಪ।।
ರಥಸಮೂಹಗಳೇರಿ ಪ್ರಕಾಶಿಪ ಬಗೆಯೊ
ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೊ
ಮಿತಿಯಿಲ್ಲದಸುರರ ಉಪೇಕ್ಷೆ ಮಾಡುವ ಬಗೆಯೊ
ಪತಿತಪಾವನ ಪೂರ್ಣಕಾಮ ನಿನಗೆ
ನುತಿಸಿ ಬಿನ್ನೈಸುವೆನು ಪೇಳೊ ।।೧।।
ಭಜಕರೆನ್ನನು ಬಿಡರೆಂಬ ಮನಸಿನ ಬಗೆಯೊ
ಅಜಭವಾದಿಗಳ ಸಂಸ್ತುತಿಗಳಾಲಿಪ ಬಗೆಯೊ
ರಜನೀಚರರ ಸದೆದು ನಾಟ್ಯವಾಡುವ ಬಗೆಯೊ
ಭುಜಗಭೂಷಣಪೂಜ್ಯಚರಣ
ತ್ರಿಜಗದ್ವಿಲಕ್ಷಣ ಸುರೂಪನಿರ್ಲೇಪ ।।೨।।
ಅನುಗರೊಶ ನೀನಾದಡೆಮ್ಮನು ಮರೆವರೆಂದು
ವನಿತೆಗಾರರಿಯದಂತುಪದೇಶಿಸುವ ಬಗೆಯೊ
ಘನಲಕ್ಷಣಮುಖಾಬ್ಜವನು ಚುಂಬಿಸುವ ಬಗೆಯೊ
ವನಜಸಂಭವನಾಸ್ಯಜನೆ ಜಗ
ಜ್ಜನಕ ಜಗನ್ನಾಥವಿಠಲ ।।೩।।
***
ರಾಗ : ಕಾಂಬೋದಿ ತಾಳ : ಝಂಪೆ (raga tala may differ in audio)