..
kruti by ಬೇಲೂರು ವೈಕುಂಠ ದಾಸರು belur vaikunta dasaru
ಕೊಡುವುದಿಲ್ಲದೆ ಪೋದ ಕಣ್ಣು ನಾಲಗೆಯಾ ಎ-
ನ್ನೊಡೆಯನಲ್ಲಾನು ಊಳಿಗನಲ್ಲವೆ ಚನ್ನಾ ಪ
ಒಂದೊಂದು ತಪ್ಪುಗಳ ಎಣಿಸಿಕೊಲ್ಲದಿರೋ ಯತಿಯ
ಕೊಂದು ಬಳಲಿಸುತಿರುವುದಿದು ಧರ್ಮವೇ
ಮುಂದೆ ನಂಬುವರಿಗೆ ಅದೃಢವಾಗದಿರು ದೇವ
ಕಂದರ್ಪಪಿತನೆ ಕಮನೀಯಮೂರುತಿಯೆ 1
ನೋಡುವುದೆಂತೊ ಕಣ್ಣಿಲ್ಲದಿರೆ ನಿನ್ನ ತುತಿ
ಮಾಡುವುದೆಂತೊ ನಾಲಿಗೆಯುಡುಗಲು
ಬೇಡುವುದೆಂತೊ ಕೈವಲ್ಯಂಗನೆಯನು ದಯ
ಮಾಡೆನ್ನ ನಲ್ಲ ದಾಸರೊಳುತ್ತಮೊತ್ತಮ ನೇ 2
ದಾಸರ ಹೃದಯ ಕಮಲ ಮಧ್ಯದೊಳಾವಾಗ
ವಾಸವಾಗಿಪ್ಪ ಸರ್ವೇಶ್ವರನೇ
ಘಾಸಿಬಡಿಸಲು ಅವರ ನೋವು ನಿನಗಲ್ಲವೇ
ಕೇಶವ ಮುರಾರಿ ಅಚ್ಚುತದಾಸನಿಗೆ ಬೇಗ3
ಕೇಳಿದನೆ ನಿನ್ನಿತರ ಹಲವು ಚಿಂತೆಯಲಿ
ತೊಳಲಿ ನೆಲೆಯರಿಯದಜ್ಞಾನಿಯಾಗಿ
ಬಳಲುವತಿಚಂಚಲಗೀ ಮಾರ್ಗವಿರಿಸಿದೇಕೋ
ನಳಿನಾಕ್ಷ ಭಕ್ತವತ್ಸಲ ಕೃಪಾಸಿಂಧೂ 4
ಶರಣರಕ್ಷಕನೆಂಬ ಬಿರುದಾರದೆಲೆ ದೇವ
ಇರಿಸು ಎಂದಿನವೋಲಚ್ಚುತದಾಸನಾ
ಹರಿಯದಿದ್ದರೆನ್ನ ಕಣ್ಣು ನಾಲಿಗೆಯ ಕಿ
ತ್ತಿರಿಸುವೆನು ಮುಂದೆ ವೈಕುಂಠವಿಠಲ ಚನ್ನಿಗರಮಣ5
***