ಹರಿ ಹರಿ ಹರಿ ಹರಿ ಹರಿಯೆನಬೇಕು ಹರಿ ಸ್ಮರಣೆಯೋಳನುದಿನವಿರಬೇಕು pa
ಹರಿಯೇ ಶ್ರೀ ಪರಬ್ರಹ್ಮೆನಬೇಕು ಹರಿ ಪರಂದೈವೆವೆಂದರಿಬೇಕು ಹರಿಯೇ ತಾ ಮನದೈವೆನಬೇಕು ಹರಿ ಋಷಿ ಮುನಿಕುಲಗೋತ್ರೆನಬೇಕು 1
ಹರಿಯೇ ತಾಯಿತಂದೆನಬೇಕು ಹರಿಯೇ ನಿಜ ಬಂಧುಬಳಗೆನಬೇಕು ಹರಿಯೇ ಆಪ್ತ ಮೈತ್ರೆನಬೇಕು ಹರಿಕುಲಕೋಟೀ ಬಳಗೆನಬೇಕು 2
ಹರಿಯೇ ಸಲಹುವ ದೊರೆಯನಬೇಕು ಹರಿ ಸುಖ ಸೌಖ್ಯದ ಸಿರಿಯೆನಬೇಕು ಹರಿ ನಾಮವೆ ಧನದ್ರವ್ಯೆನಬೇಕು ಹರಿಸ್ಮರಣೆಯು ಸಂಪದವೆನಬೇಕು 3
ಹರಿದಾಸರ ಸಂಗದಲಿರಬೇಕು ಹರಿಭಕ್ತರ ಅನುಸರಿಸಿರಬೇಕು ಹರಿಚರಣದಿ ರತಿಮನವಿಡಬೇಕು ಹರಿ ನಿಜರೂಪವ ನೋಡಲಿಬೇಕು 4
ಹರಿ ಮಹಿಮೆಯ ಕೊಂಡಾಡಲಿಬೇಕು ಹರಿಸ್ತುತಿಸ್ತವನ ಪಾಡಲಿಬೇಕು ಹರಿತಾರಕ ಪರಬ್ರಹ್ಮೆನಬೇಕು ಹರಿ ಸರುವೋತ್ತಮ ಸ್ವಾಮೆನಬೇಕು 5
ಹರಿಯೇ ಸಕಲ ತಾ ಧರ್ಮನಬೇಕು ಹರಿ ಸರ್ವಮಯ ಪುಣ್ಯಕ್ಷೇತ್ರೆನಬೇಕು ಹರಿಯೇ ಇಹಪರ ಪೂರ್ಣೆನಬೇಕು ಹರಿ ಸದೋದಿತ ಸಹಕಾರೆನಬೇಕು 6
ಹರಿ ಬಾಹ್ಯಾಂತರೇಕೋಮಯವೆನಬೇಕು ಹರಿ ಸಕಲವು ವ್ಯಾಪಕವೆನಬೇಕು ಹರಿಯೇ ಶ್ರೀ ಪರಮಾತ್ಮೆನಬೇಕು ಹರಿ ಮಹಿಪತಿ ಸದ್ಗತಿಯೆನಬೇಕು 7
***