ರಚನೇ : ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ ವೇಂಕಟನಾಥ
ನರಸಿಂಹ ಸಲಹಯ್ಯ ನರಸಿಂಹಾ ।
ದುರಿತ ಪರಿಹಾರಕ ನರಸಿಂಹಾ ।। ಪಲ್ಲವಿ ।।
ಕಮಲಾಕ್ಷ ಕಾಮಲಾಂಬಕ - ನರಸಿಂಹಾ ।
ಕಮಲಮಾರ್ಗಣ ಪಿತ - ನರಸಿಂಹಾ ।। ಚರಣ ।।
ಕಮನೀಯ ರೂಪ - ನರಸಿಂಹಾ ।
ಕಮನೀಯ ಗಾತ್ರ - ನರಸಿಂಹಾ ।। ಚರಣ ।।
ಕಮಲಜ ಪಿತ - ನರಸಿಂಹಾ ।
ಕಮಲಜ ಸುತ ಪ್ರಿಯ - ನರಸಿಂಹಾ ।। ಚರಣ ।।
ಚತುರಾಯುಧ ಚತುರಾಸ್ಯ -
ವಂದ್ಯ - ನರಸಿಂಹಾ ।
ಚತುರ್ವಿಧ ಪುರುಷಾರ್ಥ -
ಕೊಡು - ನರಸಿಂಹಾ ।। ಚರಣ ।।
ಚತುರಕುಲಜ ಕೈ -
ಪಿಡಿಯೋ - ನರಸಿಂಹಾ ।
ಚತುರಮೂರ್ತಿ -
ರಕ್ಷಿಸಯ್ಯಾ - ನರಸಿಂಹಾ ।। ಚರಣ ।।
ನಳಿನೋದರ ನರಸಿಂಹಾ ।
ನಳಿನಲೋಚನ ನರಸಿಂಹಾ ।। ಚರಣ ।।
ನಳಿನನಾಭ ನಾರಸಿಂಹಾ ।
ನಳಿನಜಾಂಡದೊಡೆಯ
ನರಸಿಂಹಾ ।। ಚರಣ ।।
ಪ್ರಹ್ಲಾದ ಬಾಹ್ಲೀಕ ವ್ಯಾಸರಾಜ -
ರಾಘವೇಂದ್ರ ವರದ ನಾರಸಿಂಹಾ ।
ಸಹ್ಲಾದ ಕಲ್ಹಾದ ಆಹ್ಲಾದ ವರದ -
ವೇಂಕಟನಾಥ ನಾರಸಿಂಹಾ ।।
****
" ಶ್ರೀ ನರಸಿಂಹ ಪಾಲಯಮಾಂ "
ನರಶ್ಚ ಸಿಂಹಶ್ಚ ನರಸಿಂಹೌ ।
ನರಸಿಂಹಯೋರಿದಂ
ನಾರಸಿಂಹಮ್ ।
ನಾರಸಿಂಹಂ ವಪು:
ಯಸ್ಯಸಃ ನಾರಸಿಂಹವಪು: ।।
ಭಕ್ತರ ಅನುಗ್ರಹಕ್ಕಾಗಿ ಮನುಷ್ಯ ದೇಹ - ಸಿಂಹದ ತಲೆಯನ್ನುಳ್ಳ ಶರೀರವನ್ನು ಧರಿಸಿರುವನು!!
ವಿವರಣೆ :
ಕಮಲಾಂಬಕ = ಕಮಲದಂಥಾ ಕಣ್ಣುಗಳುಳ್ಳವ
ಕಮಲಮಾರ್ಗಣ = ಮನ್ಮಥ
ಕಮನೀಯ ರೂಪ = ಮನೋಹರವಾದ ಸುಂದರ ರೂಪ
ಕಮನೀಯ ಗಾತ್ರ = ಸುಂದರವಾದ ಶರೀರ ಉಳ್ಳವನು
ಕಮಲಜ = ಶ್ರೀ ಚತುರ್ಮುಖ ಬ್ರಹ್ಮದೇವರು
ಕಮಲಜ ಸುತ = ಶ್ರೀ ನಾರದ ಮಹರ್ಷಿಗಳು
ಚತುರಾಯುಧ = ಶಂಖ - ಚಕ್ರ - ಗದಾ - ಪದ್ಮ
ಚತುರಾಸ್ಯ = ಶ್ರೀ ಚತುರ್ಮುಖ ಬ್ರಹ್ಮದೇವರು
ಚತುರಕುಲಜ = ಶ್ರೀ ಕೃಷ್ಣ ಪರಮಾತ್ಮ
ಚತುರ ಮೂರುತಿ = ಶ್ರೀ ಅನಿರುದ್ಧ - ಶ್ರೀ ಪ್ರದ್ಯುಮ್ನ - ಶ್ರೀ ಸಂಕರ್ಷಣ - ಶ್ರೀ ವಾಸುದೇವ
ನಳಿನೋದರ = ಹೊಟ್ಟೆಯಲ್ಲಿ ಕಮಲ ಉಳ್ಳವನು ( ಶ್ರೀ ಪದ್ಮನಾಭ )
ನಳಿನಲೋಚನ = ಕಮಲಾಕ್ಷ
ನಳಿನಜಾಂಡ ಪತಿ = ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ (ಶ್ರೀ ಮಹಾವಿಷ್ಣು)
ಗುರು ವಿಜಯ ಪ್ರತಿಷ್ಠಾನ
*****